ಜನರಲ್ ರಾವತ್ 
ದೇಶ

ಬಂದೂಕು ಒಂದೇ ಪರಿಹಾರವಲ್ಲ : ಕಾಶ್ಮೀರಿ ಯುವಕರಿಗೆ ಜನರಲ್ ರಾವತ್ ಕಿವಿಮಾತು

ಬಂದೂಕು ಒಂದೇ ಪರಿಹಾರವಲ್ಲಾ ಎಂಬುದನ್ನು ಕಾಶ್ಮೀರದ ತೀವ್ರಗಾಮಿ ಯುವಕರು ಮನಗಾಣಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ರಾವತ್ ಕಿವಿಮಾತು ಹೇಳಿದ್ದಾರೆ.

ಜಮ್ಮು -ಕಾಶ್ಮೀರ  :  ಸೇನೆ ಇರಬಹುದು ಅಥವಾ ಉಗ್ರ ಚಟುವಟಿಕೆ ಇರಬಹುದು ಎಲ್ಲಾದಕ್ಕೂ ಬಂದೂಕು ಒಂದೇ ಪರಿಹಾರವಲ್ಲಾ ಎಂಬುದನ್ನು ಕಾಶ್ಮೀರದ ತೀವ್ರಗಾಮಿ ಯುವಕರು ಮನಗಾಣಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ರಾವತ್ ಕಿವಿಮಾತು ಹೇಳಿದ್ದಾರೆ.

ಕಾಶ್ಮೀರದಲ್ಲಿನ ಪರಿಸ್ಥಿತಿ ಸುಧಾರಿಸಲು ಶಾಂತಿಯೊಂದೇ ಮಾರ್ಗ . ಮೂರು ದಶಕಗಳಿಂದಲೂ ಇಲ್ಲಿಯವರೆಗೂ ದಂಗೆಗೆ ಕಾಶ್ಮೀರ ಸಾಕ್ಷಿಯಾಗುತ್ತಲೇ ಇದೆ. ಆದರೆ , ಈಗ ಸ್ವಲ್ಪ ಪರಿಸ್ಥಿತಿ ಸುಧಾರಿಸಿದ್ದು, ಆದರೆ  ಕೆಲ ಯುವಕರು  ತೀವ್ರಗಾಮಿ ರೀತಿಯ ಚಟುವಟಿಕೆಯಲ್ಲಿ ನಿರತರಾಗಿದ್ದು, ಬಂದೂಕು ಮೂಲಕ ಗುರಿಸಾಧಿಸಲು ಹೊರಟಿದ್ದಾರೆ  ಎಂದಿದ್ದಾರೆ.

ಶಾಂತಿಗಾಗಿ ಎಲ್ಲರೂ ಒಗ್ಗೂಡಿ ಪರಿಹಾರ ಮಾರ್ಗ ಕಂಡುಹಿಡಿದು  ಅದರಲ್ಲಿ ಯಶಸ್ವಿಯಾಗೋಣ ಎಂದು ರಾವತ್ ಹೇಳಿದ್ದಾರೆ.

ಲಘು  ಕಾಲಾಳುಪಡೆಯ 70 ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಮಾಜಿ ಸೇನಾ ಮುಖ್ಯಸ್ಥರು,  ಕಣಿವೆ ಭಾಗದಲ್ಲಿನ ಜನರು ಭಯದಿಂದಲೇ ಬದುಕು ಸಾಗಿಸುತ್ತಿದ್ದಾರೆ. ಕೆಲವರಷ್ಟೇ ಶಾಂತಿಯಿಂದ ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿದರು.

 ಇಂತಹ ಚಟುವಟಿಕೆಗಳಿಂದ ದೂರ ಇದ್ದು, ವಿಶ್ವವಿದ್ಯಾಲಯಗಳತ್ತ ಗಮನ ಹರಿಸುವಂತೆ ಕಾಶ್ಮೀರ ಯುವಕರಿಗೆ ತಿಳಿಸಿದ ರಾವತ್,  ಒಗ್ಗೂಡಿ ಕಾರ್ಯನಿರ್ವಹಿಸುವುದರಿಂದ ಶಾಂತಿಯನ್ನು ಸ್ಥಾಪಿಸಬಹುದು ಎಂದರು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT