ಖರಗ್‌ಪುರ: ಜಗತ್ತಿನ ಅತೀ ಪ್ರಾಚೀನ ಸಿಂಧು ನಾಗರಿಕತೆ ನಾಶವಾಗಲು ಕಾರಣವೆಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
4,500 ವರ್ಷಗಳ ಹಿಂದೆ ಸಿಂಧೂ ಕಣಿವೆ ನಾಗರಿಕತೆ ಒಂಭೈನ್ನೂರು ವರ್ಷಗಳ ಸತತ ಬರಗಾಲದಿಂದಾಗಿ ನಶಿಸಿ ಹೋಯಿತು ಎಂಬುದನ್ನು ಖರಗ್‌ಪುರ ಐಐಟಿ ವಿಜ್ಞಾನಿಗಳ ತಂಡದ ಸಂಶೋಧನೆಯ ಅಧ್ಯಾಯನದಿಂದಾಗಿ ತಿಳಿದುಬಂದಿದೆ.
ಐಐಟಿಯ ಭೂವಿಜ್ಞಾನ ಮತ್ತು ಭೂಭೌತ ವಿಜ್ಞಾನಗಳ ವಿಭಾಗದ ಸಂಶೋಧಕರು ಕಳೆದ 5 ಸಾವಿರ ವರ್ಷಗಳ ಮಾನ್ಸೂನ್ ಏರಿಳಿತಗಳ ಅಧ್ಯಯನ ನಡೆಸಿದೆ. ವಾಯುವ್ಯ ಹಿಮಾಲಯದ ಪ್ರದೇಶಗಳಲ್ಲಿ ಸತತ 900 ವರ್ಷಗಳ ಕಾಲ ಭೀಕರ ಬರಗಾಲ ಉಂಟಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.
ತೀವ್ರ ಬರಗಾಲದಿಂದ ನಾಗರಿಕತೆಯ ಬೆಳವಣಿಗೆಗೆ ಕಾರಣವಾಗಿದ್ದ ನದಿಗಳೆಲ್ಲ ಬತ್ತಿಹೋದವು. ಕ್ರಮೇಣ ಅಲ್ಲಿ ವಾಸಿಸುತ್ತಿದ್ದ ಜನರೆಲ್ಲ ಮಳೆ ಚೆನ್ನಾಗಿ ಬೀಳುತ್ತಿದ್ದ ಪೂರ್ವ ಮತ್ತು ದಕ್ಷಿಣದ ಕಡೆಗೆ ವಲಸೆ ಹೋದರು.
ಈ ರೀತಿ ನೆಲೆ ಕಳೆದುಕೊಂಡ ಜನರು ಕ್ರಮೇಣ ಗಂಗಾ-ಯಮುನಾ ಕಣಿವೆಯತ್ತ ಪೂರ್ವ ಮತ್ತು ಮಧ್ಯ ಉತ್ತರ ಪ್ರದೇಶ ಬಿಹಾರ ಮತ್ತು ಬಂಗಾಳ ಹಾಗೂ ದಕ್ಷಿಣದಲ್ಲಿ ವಿಂಧ್ಯಾಚಲ ಮತ್ತು ದಕ್ಷಿಣ ಗುಜರಾತ್ ಕಡೆ ವಲಸೆ ಹೋದರು ಎಂದು ಸಂಶೋಧಕರ ತಂಡದ ಮುಖ್ಯಸ್ಥ ಅನಿಲ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಲೇಹ್-ಲಡಾಖ್ ಪ್ರದೇಶದ ಸೊ ಮೊರಿರಿ ಸರೋವರದ ಸುತ್ತಮುತ್ತ 5 ಸಾವಿರ ವರ್ಷಗಳ ಮಳೆ ಪ್ರವೃತ್ತಿಯನ್ನು ಐಐಟಿ ಖರಗ್ಪುರದ ವಿಜ್ಞಾನಿಗಳ ತಂಡದ ಅಧ್ಯಯನ ನಡೆಸಿದ್ದು ಈ ಅಧ್ಯಯನದ ವಿವರಗಳು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪತ್ರಿಕೆ ಕ್ವಾಟೆರ್ನರಿ ಇಂಟರ್ ನ್ಯಾಷನಲ್ ಜರ್ನಲ್ ನಲ್ಲಿ ಈ ತಿಂಗಳು ಪ್ರಕಟವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos