ದೇಶ

ಭೇಟಿ ಬಚಾವೋ, ಭೇಟಿ ಪಡಾವೋಗಾಗಿ ನಮ್ಮ ಹೆಣ್ಣುಮಕ್ಕಳು ಜೀವಂತವಾಗಿರಬೇಕು: ಶಬಾನಾ

Srinivas Rao BV
ಮುಂಬೈ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೇಟಿ ಬಚಾವೋ, ಭೇಟಿ ಪಡಾವೋ ಯಶಸ್ವಿಯಾಗಬೇಕಾದರೆ ನಮ್ಮ ಹೆಣ್ಣುಮಕ್ಕಳು ಜೀವಂತವಾಗಿರಬೇಕು ಎಂದು ಹಿರಿಯ ನಟಿ ಶಬಾನಾ ಅಜ್ಮಿ ಹೇಳಿದ್ದಾರೆ. 
ಬೆಟ್ಟಿ ಫ್ಲೋ GR8 ಅವಾರ್ಡ್ಸ್ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಜಮ್ಮು-ಕಾಶ್ಮೀರದ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿದ್ದು,  ಒಂದೇ ಬಾರಿಗೆ ನಮ್ಮ ರಾಷ್ಟ್ರ ವಿವಿಧ ಶತಮಾನಗಳಲ್ಲಿ ಜೀವಿಸುತ್ತಿದೆ. 18ನೇ ಶತಮಾನ, 19, 20, 21 ಎಲ್ಲಾ ಶತಮಾನಗಳಲ್ಲಿಯೂ ಒಟ್ಟಿಗೆ ಜೀವಿಸುತ್ತಿದ್ದು, ನಮ್ಮ ದೇಶದ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯ ಮೂಲಕ ಇದು ಅರಿವಿಗೆ ಬರುತ್ತಿದೆ ಎಂದು ಹೇಳಿದ್ದಾರೆ. 
ಮಹಿಳೆಯರು ತಮ್ಮದೇ ಆದ ಸಾಧನೆ ಮಾಡಿದ್ದಾರೆ. ನಾಯಕಿಯರಾಗಿಯೂ ಯಶಸ್ಸು ಕಂಡಿದ್ದಾರೆ. ಮತ್ತೊಂದೆಡೆ ಅತ್ಯಾಚಾರದಂತಹ ಹೀನ ಕೃತ್ಯಗಳೂ ನಡೆಯುತ್ತಿವೆ. ಆದರೆ ನಾವೆಲ್ಲರೂ ಒಗ್ಗೂಡಿ ಇಂತಹ ಘಟಾನೆಗಳು ನಡೆಯದಂತೆ ಎಚ್ಚರ ವಹಿಸಬೇಕಿದೆ ಎಂದು ಹೇಳಿದ್ದಾರೆ. 
ನಾವು ಬೇಟಿ ಬಚಾವೋ, ಭೇಟಿ ಪಡಾವೋ ಯೋಜನೆ ಯಶಸ್ವಿಯಾಗಬೇಕಾದರೆ ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕು, ನಮ್ಮ ಹೆಣ್ಣುಮಕ್ಕಳು ಉಳಿಯಬೇಕು ಎಂದು ಹೇಳಿದ್ದಾರೆ. 
SCROLL FOR NEXT