ದೇಶ

ತಾಜ್ ಮಹಲ್ ಮಾಲಿಕತ್ವ ನಮಗೆ ಬೇಡ: ಸುನ್ನಿ ವಕ್ಫ್ ಬೋರ್ಡ್

Raghavendra Adiga
ನವದೆಹಲಿ: ತಾಜ್ ಮಹಲ್ ಮಾಲಿಕತ್ವವನ್ನು ನಾವು ಬಯಸುವುದಿಲ್ಲ ಎಂದು ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರನ್ನೊಳಗೊಂಡಿದ್ದ ಪೀಠ "ಮಂಡಳಿ ತಾಜ್ ಮಾಲಿಕತ್ವವನ್ನು ಕೇಳುತ್ತಿದೆ, ಇದಕ್ಕೆ ನಿಮ್ಮ ಉತ್ತರ ಹೇಳಿ ಎಂದು ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್ಐ) ಪರ ವಕೀಲ ಎ.ಡಿ.ಎನ್. ರಾವ್ ಅವರಿಗೆ ಕೇಳಿತ್ತು. 
"ಒಮ್ಮೆ ಸ್ಮಾರಕವನ್ನು ವಕ್ಫ್ ಸ್ವತ್ತು ಎಂದು ನೋಂದಾಯಿಸಿದ ನಂತರ,ಮತ್ತೆ ಅದನ್ನು ಬದಲಾಯಿಸಲು ಬರುವುದಿಲ್ಲ" ನ್ಯಾಯಪೀಠ ಹೇಳಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಇದಕ್ಕೂ ಹಿಂದೆ ಏಪ್ರಿಲ್ 11ರಂದು ನಡೆದ ವಿಚಾರಣೆಯಲ್ಲಿ, ಮೊಘಲ್ ಚಕ್ರವರ್ತಿ ಷಹಜಹಾನ್ ಸಹಿ ಹೊಂದಿರುವ ಮೂಲ ದಾಖಲೆ ಒದಗಿಸುವಂತೆ ಸುಪ್ರೀಂ ಕೋರ್ಟ್ ವಕ್ಫ್ ಮಂಡಳಿಗೆ ಸೂಚಿಸಿತ್ತು.
SCROLL FOR NEXT