ದೇಶ

ಹನುಮಂತ ದೇವಾಲಯಕ್ಕೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ಬಿಜೆಪಿ ಎಂಎಲ್‌ಸಿ ವಿರುದ್ಧ ಫತ್ವಾ!

Vishwanath S
ಲಖನೌ(ಉತ್ತರಪ್ರದೇಶ): ಹನುಮಂತ ದೇವಾಲಯಕ್ಕೆ ಭೇಟಿ ನೀಡಿದ್ದ ಉತ್ತರಪ್ರದೇಶದ ಬಿಜೆಪಿ ಎಂಎಲ್‌ಸಿ ವಿರುದ್ಧ ಇಸ್ಲಾಮಿಕ್ ಸಂಘಟನೆಯೊಂದು ಫತ್ವಾ ಹೊರಡಿಸಿದೆ.
ದರುಲ್ ಉಲೂಮ್ ಅಶಾರ್ಫಿಯಾ ಮದಸರದ ಮುಖ್ಯಸ್ಥ ಮೌಲಾನ ಸಲೀಂ ಅಶ್ರಫ್ ಖಾಸಿಂ ಲಖೌನ್ ನಲ್ಲಿರುವ ಹನುಮಂತ ದೇವಾಲಯಕ್ಕೆ ಭೇಟಿ ನೀಡಿದ್ದ ಬಿಜೆಪಿ ಎಂಎಲ್‌ಸಿ ಬುಕ್ಕಲ್ ನವಾಬ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ. 
ಇಸ್ಲಾಂ ಮತ್ತು ಮುಸ್ಲಿಂ ಸಮುದಾಯದಲ್ಲಿ ಹಿಂದೂ ದೇವರನ್ನು ಆರಾಧಿಸುವುದಿಲ್ಲ. ಇಸ್ಲಾಂನಲ್ಲಿ ಯಾರೂ ವಿಗ್ರಹವನ್ನು ಪೂಜಿಸಲು ಅನುಮತಿಸುವುದಿಲ್ಲ.  ಹಿಂದೂ ದೇವರ ಆರಾಧನೆ ಇಸ್ಲಾಂಗೆ ವಿರುದ್ಧವಾದುದ್ದು ಅಥವಾ ಕ್ರಿಕೆಯನ್ನು ಅನುಸರಿಸುವವರು ಯಾರಾದರೂ ಆಗಲಿ ಅವರನ್ನು ಇಸ್ಲಾಂನಿಂದ ಹೊರಹಾಕಲಾಗುವುದು ಎಂದು ಹೇಳಿದ್ದಾರೆ.
ಅಲ್ಲಾನಲ್ಲಿ ಕ್ಷಮಾಪಣೆ ಕೇಳಿ ಮತ್ತು ಕಲ್ಮಾವನ್ನು ಮೂರು ಬಾರಿ ಓದುವ ಮೂಲಕ ಸ್ವತಃ ತಮ್ಮನ್ನು ಶುದ್ಧೀಕರಿಸಿಕೊಂಡರೆ ಮಾತ್ರ ನವಾಬನನ್ನು ಮತ್ತೆ ಸ್ವಾಗತಿಸಲಾಗುತ್ತದೆ ಎಂದು ಮೌಲಾನ ಸಲೀಂ ಅಶ್ರಫ್ ಖಾಸಿಂ ಹೇಳಿದ್ದಾರೆ. 
ಸಮಾಜವಾದಿ ಪಕ್ಷದವರಾಗಿದ್ದ ಬುಕ್ಕಲ್ ನವಾಬ್ ಅವರು ಬಿಜೆಪಿ ಪಕ್ಷವನ್ನು ಸೇರಿದ್ದರು. ಇತ್ತೀಚೆಗಷ್ಟೇ ನಡೆದ ಉತ್ತರಪ್ರದೇಶ ರಾಜ್ಯಸಭಾ ಚುನಾವಣೆಗೆ ನಾಮನಿರ್ದೇಶನ ಮಾಡಿತ್ತು. ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ್ದ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಲಹೆ ನೀಡಿದ್ದರು. 
ಇನ್ನು ತಮ್ಮ ವಿರುದ್ಧ ಹೊರಡಿಸಲಾಗಿರುವ ಫತ್ವಾ ಕುರಿತಂತೆ ಪ್ರತಿಕ್ರಿಯಿಸಿರುವ ಬುಕ್ಕಲ್ ಅವರು ನನಗೂ ಹಾಗೂ ನನ್ನ ಕುಟುಂಬಕ್ಕೆ ಹನುಮಂತನ ಮೇಲೆ ಭಕ್ತಿಯಿದೆ. ಜತೆಗೆ ನಮ್ಮ ಸಂವಿಧಾನವು ಯಾವುದೇ ಧರ್ಮವನ್ನು ಆರಾಧಿಸುವ ಅವಕಾಶವನ್ನು ಮಾಡಿಕೊಟ್ಟಿದೆ ಎಂದರು.
SCROLL FOR NEXT