ದೇಶ

ಭೂಗತ ಪಾತಕಿ ದಾವೂದ್ ಆಸ್ತಿ ವಶಪಡಿಸಿಕೊಳ್ಳಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್

Manjula VN
ನವದೆಹಲಿ: 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಹಾಗೂ ಭೂಗತ ಪಾತಗಿ ದಾವೂದ್ ಇಬ್ರಾಹಿಂ ಅಕ್ರಮ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದೆ. 
ಮುಂಬೈನಲ್ಲಿರುವ ದಾವೂದ್ ಒಡೆತನದ ವಸತಿ ಕಟ್ಟಡವನ್ನು ವಶಕ್ಕೆ ಪಡೆದುಕೊಳ್ಳದಂತೆ ದಾವೂದ್ ತಾಯಿ ಅಮೀನಾ ಬೀ ಮತ್ತು ಸಹೋದರಿ ಹಸೀನಾ ಇಬ್ರಾಹಿಂ ಪಾರ್ಕ್'ಅವರು ಅರ್ಜಿ ಸಲ್ಲಿಸಿದ್ದರು. 
ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಆರ್.ಕೆ. ಅಗ್ರವಾಲ್ ನೇತೃತ್ವದ ಪೀಠ, ದಾವೂದ್ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದು, ಈ ಮೂಲಕ ಅರ್ಜಿಯನ್ನು ವಜಾಗೊಳಿಸಿದೆ. 
ಸ್ಮಗ್ಲರ್, ವಿದೇಶಿ ವಿನಿಮಯ ವಂಚಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಇರುವ ಕಾನೂನಿನ ಅನ್ವಯ 1988ಕಸ್ಸಿ ಮಹಾರಾಷ್ಟ್ರ ಸರ್ಕಾರ ದಾವೂದ್ ಆಸ್ತಿ ವಶ ಪ್ರಕ್ರಿಯೆಯನ್ನು ಆರಂಭಿಸಿದ್ದು. ಇದನ್ನು ಪ್ರಶ್ನಿಸಿ ದಾವೂದ್ ತಾಯಿ ಹಾಗೂ ಸಹೋದರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಸುಪ್ರೀಂಕೋರ್ಟ್'ನಲ್ಲಿ ಮೇಲ್ಮನವಿಯಲ್ಲಿ ಸಲ್ಲಿಸಿದ್ದರು. ಇದೀಗ ಈ ಅರ್ಜಿ ಕೂಡ ವಜಾಗೊಂಡಿದೆ. 
ದಾವೂದ್ ಒಡೆತನದಲ್ಲಿ ಮುಂಬೈ ನಾಗಪಾಡದಲ್ಲಿ ಒಟ್ಟು 7 ವಸತಿ ಕಟ್ಟಡ ಇದ್ದು, ಇವುಗಳಲ್ಲಿ 2 ದಾವೂದ್ ತಾಯಿ ಅಮೀನಾ ಅವರ ಹೆಸರಲ್ಲಿದ್ದರೆ, ಉಳಿದ 5 ಸಹೋದರಿ ಹಸೀನಾ ಅವರ ಹೆಸರಿನಲ್ಲಿದೆ. ಆದರೆ, ಇವೆಲ್ಲವನ್ನೂ ದಾವೂದ್ ಅಕ್ರಮವಾಗಿ ಸಂಪಾದನೆ ಮಾಡಿರುವುದರಿಂದ ಅದನ್ನು ವಶಕ್ಕೆ ಪಡೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ ಎಂದು ನ್ಯಾಯಾಲಯ ತಿಳಿಸಿತ್ತು. 
SCROLL FOR NEXT