ಗುರುವಾಯೂರು ಶ್ರೀಕೃಷ್ಣ ದೇವಾಲಯ 
ದೇಶ

ಕೇರಳ: ಹಿಂದೂಯೇತರರಿಗೆ ಗುರುವಾಯೂರು ದೇವಸ್ತಾನದ ಪ್ರಸಾದ ವಿತರಣೆ; ಮುಸ್ಲಿಂ ಮಹಿಳೆಯರಿಂದ ಸ್ವೀಕಾರ

ಗುರುವಾಯೂರು ಶ್ರೀಕೃಷ್ಣ ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪರ್ಧಾ ಧರಿಸಿದ್ದ ಮಹಿಳೆಯರು ದೇವಾಲಯ ಆವರಣದ ಹೊರಗಿರುವ ಅನ್ನಲಕ್ಷ್ಮಿ ಹಾಲ್ ನಲ್ಲಿ......

ತ್ರಿಶೂರ್ (ಕೇರಳ): ಗುರುವಾಯೂರು ಶ್ರೀಕೃಷ್ಣ  ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪರ್ಧಾ ಧರಿಸಿದ್ದ ಮಹಿಳೆಯರು ದೇವಾಲಯ ಆವರಣದ ಹೊರಗಿರುವ ಅನ್ನಲಕ್ಷ್ಮಿ ಹಾಲ್ ನಲ್ಲಿ ದೇವರ ಪ್ರಸಾದ ಸ್ವೀಕರಿಸಿದ್ದಾರೆ. ಇದೇ ಬುಧವಾರ ಹಾಗೂ ಗುರುವಾರದ ದೇವರ ಪ್ರಸಾದ ಭೋಜನಗಳನ್ನು ಮುಸ್ಲಿಂ ಮಹಿಳೆಯರು ಸ್ವೀಕರಿಸಿದ್ದಾರೆ.
ಗುರುವಾಯೂರ್ ದೇವಸ್ವಂ ಮಂಡಳಿಯು ಇದೇ ಮೊದಲ ಬಾರಿಗೆ ಹಿಂದೂಗಳಲ್ಲದವರು ಸಹ ದೇವರ ಪ್ರಸಾದ ಸ್ವೀಕರಿಸಬಹುದೆಂದು ತೀರ್ಮಾನಿಸಿದೆ. ಅಲ್ಲದೆ ಅನ್ನಲಕ್ಷ್ಮಿ ಹಾಲ್ ಗೆ ಪುರುಷರು, ಶರ್ಟ್, ಪ್ಯಾಂಟ್ ಹಾಗೂ ಪಾದರಕ್ಷೆಗಳನ್ನು ಧರಿಸಿ ಪ್ರವೇಶಿಸಬಹುದೆಂದು ಮಂಡಳಿಯು ಗುರುವಾರದ ಸಭೆಯಲ್ಲಿ ತೀರ್ಮಾನಕ್ಕೆ ಬಂದಿದೆ.
ದೇವರ ಪ್ರಸಾದ ವಿತರಣೆ ಸಂಬಂಧ ಐಯುಎಲ್ಎಲ್ ತೀರ್ಮಾನ
 "ಪ್ರತಿದಿನ ಮಧ್ಯಾಹ್ನ ಸುಮಾರು 5,000 ಭಕ್ತರಿಗೆ ನಾವು ಪ್ರಸಾದ ವಿತರಿಸಿದ್ದೇವೆ.ವಿಶೇಷ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ಕೊಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಲಿದ್ದು 7,000 ಮಂದಿ ಪ್ರಸಾದ ಸ್ವೀಕಾರದಲ್ಲಿ ಭಾಗವಹಿಸಲಿದ್ದಾರೆ. ದೇವಾಲಯದ ಆವರಣದಿಂದ ಹೊರಗಿರುವ ಅನ್ನಲಕ್ಷ್ಮಿ ಹಾಲ್ ನಲ್ಲಿ ಹಿಂದೂಗಳಲ್ಲದವರು ಸಹ ಪ್ರಸಾದ ಸ್ವೀಕಾರ ಕಾರ್ಯಕ್ರಮದಲ್ಲಿ ಬಾಗವಹಿಸಲು ಅವಕಾಶ ನೀಡಿ ಆಡಳಿತ ಮಂಡಳಿ ತೀರ್ಮಾನಿಸಿದೆ. ಇದು ಉತ್ತಮ ತೀರ್ಮಾನವಾಗಿದೆ. ದೇವಾಲಯದ ತಂತ್ರಿಗಳು ಸಹ ಇದಕ್ಕೆ ಸಮ್ಮತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.
"ಬೇರೆ ಧರ್ಮದವರಿಗೆ ಪ್ರಸಾದ ಸ್ವೀಕಾರಕ್ಕೆ ಅವಕಾಶ ನೀಡಿದ ಬಳಿಕವೂ ಭಕ್ತಾದಿಗಳ ಸಂಖ್ಯೆಯಲ್ಲಿ ಯಾವ ಹೆಚ್ಚಳ ಕಂಡುಬಂದಿಲ್ಲ. ಆದರೆ ಕೆಲ ಮಹಿಳೆಯರು ಪರ್ದಾ ಧರಿಸಿದ್ದರು. ನಾವು ದೇವರ ಪ್ರಸಾದ ಸ್ವೀಕಾರಕ್ಕೆ ಆಗಮಿಸುವವರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಸಾಧ್ಯವಿಲ್ಲ" ಗುರುವಾಯೂರ್ ದೇವಸ್ವಾಮ್ ಆಡಳಿತಾಧಿಕಾರಿ ಸಿ. ಸಿ.ಶಶಿಧರನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಬೆಳಿಗ್ಗೆ ದೇವಾಲಯದಲ್ಲಿ ಉಪ್ಪಿಟ್ಟನ್ನು ಪ್ರಸಾದವಾಗಿ ನೀಡಲಾಗುವುದು. ಸುಮಾರು 500 ಭಕ್ತಾದಿಗಳು ನಿತ್ಯದ ಬೆಳಿಗ್ಗಿನ ಉಪಹಾರ ಸ್ವೀಕರಿಸುತ್ತಾರೆ. ಇದೇ ಮಧ್ಯಾಹ್ನದ ವೇಳೆ ಸಾವಿರಾರು ಭಕ್ರತು ದೇವರ ಪ್ರಸಾದ ಸ್ವೀಕಾರದಲ್ಲಿ ಭಾಗಿಗಳಾಗುತ್ತಾರೆ. ದೇವಾಲಯದ ಆವರಣದೊಳಗಿದ್ದ ಭೋಜನ ಶಾಲೆಯನ್ನು ಎರಡು ವರ್ಷಗಳ ಹಿಂದೆ ಹೊರಭಾಗಕ್ಕೆ ಸ್ಥಳಾಂತರಿಸಲಾಗಿದೆ.
ಯೇಸುದಾಸ್ ಗೆ ದೇವಾಲಯಕ್ಕೆ ಪ್ರವೇಶ ಇತ್ಯರ್ಥವಿಲ್ಲ
ಗುರುವಾಯೂರು ಶ್ರೀಕೃಷ್ಣ ನ ಕುರಿತಂತೆ ಸಾವಿರಾರು ಭಕ್ತಿಗೀತೆಗಳನ್ನು ಹಾಡಿರುವ ಪ್ರಖ್ಯಾತ ಸಂಗೀತಗಾರ ಕೆ.ಜೆ. ಯೇಸುದಾಸ್ ಅವರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದೆ ಎಂದು ಕೇಳಿದ ಪ್ರಶ್ನೆಗೆ "ಈ ಸಂಬಂಧ ಮಂಡಳಿಯ ಸಭೆಯಲ್ಲಿ ಯಾವ ತೀರ್ಮಾನಕ್ಕೆ ಬರಲಾಗಿಲ್ಲ" ಎಂದು ಶಶಿಧರನ್  ತಿಳಿಸಿದ್ದಾರೆ.
ನಿರ್ಧಾರಕ್ಕೆ ಸ್ವಾಗತ
ಗುರುವಾಯೂರ್ ದೇವಸ್ವಂ ಆಡಳಿತ ಮಂಡಳಿಯ ನಿರ್ಧಾರಕ್ಕೆ ಮುಸ್ಲಿಂ ಸಮುದಾಯದಿಂದಲೂ ಉತ್ತಮ ಸ್ವಾಗತ ವ್ಯಕ್ತವಾಗಿದೆ. ಗುರುವಾಯೂರು ಸಮೀಪದ ಚಾವಕ್ಕಾಡ್ ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ಎಚ್. ರಶೀದ್ ಮಾತನಾಡಿ  "ಪ್ರಾದೇಶಿಕವಾಗಿ ಹಿಂದು-ಮುಸ್ಲಿಮರ ನಡುವಿನ ಸೌಹಾರ್ದ ಸಂಬಂಧ ಸುಧಾರಣೆಗೆ ಈ ನಿರ್ಧಾರ ಪೂರಕವಾಗಿದೆ" ಎಂದರು.
"ನಂಬಿಕೆಗಳಲ್ಲಿ ವ್ಯತ್ಯಾಸಗಳಿದ್ದರೂ ಸಹ ಗುರುವಾಯೂರಿನ ನಿವಾಸಿಗಳ ನಡುವೆ ಧಾರ್ಮಿಕ ಸಾಮರಸ್ಯದ ವಾತಾವರಣವಿದೆ.ದೇವಾಲಯದ ಪ್ರಸಾದ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಸ್ಲಿಂ ಸಮುದಾಯದವರನ್ನು ಕಾಣಲು ನನಗೆ ಸಂತಸವಾಗುತ್ತದೆ.  ನಮ್ಮ ಸಮುದಾಯದ ಜನರಿಗೆ ದೇವಾಲಯದ ಪ್ರಸಾದ ವಿನಿಯೋಗದಲ್ಲಿ ಪಾಲ್ಗೊಳ್ಳುವಂತೆ ನಾನು ಸೂಚಿಸುತ್ತೇನೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT