ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್
ನವದೆಹಲಿ; ರಾಜಕೀಯದ ಕದನಕ್ಕೆ ನ್ಯಾಯಾಲಯವನ್ನು ಬಳಸಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಗುರುವಾರ ಹೇಳಿದ್ದಾರೆ.
ರಾಯಕೀಯದ ಕದನಗಳನ್ನು ರಾಜಕೀಯದ ವೇದಿಕೆಯಲ್ಲಿಯೇ ಮಾಡಬೇಕೆಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಲೋಯಾ ಪ್ರಕರಣ ಸಂಬಂಧ ನಮ್ಮ ಪಕ್ಷದ ಅಧ್ಯಕ್ಷರ ವಿರುದ್ಧ ರಾಜಕೀಯ ಕದನವನ್ನು ಆರಂಭಿಸಲಾಗುತ್ತಿದೆ. ರಾಜಕೀಯ ಯುದ್ಧವನ್ನು ನ್ಯಾಯಾಲಯದ ಅಂಗಳದಲ್ಲಿ ಆಡದಂತೆ ರಾಹುಲ್ ಗಾಂಧಿಯವರಿಗೆ ಆಗ್ರಹಿಸುತ್ತೇನೆಂದು ಹೇಳಿದ್ದಾರೆ.
ಸಾರ್ವಜನಿಕರ ಹಿತಾಸಕ್ತಿಯಿಂದ ಪ್ರಕರಣ ಜೀವ ಪಡೆದುಕೊಂಡಿಲ್ಲ. ಬದಲಾಗಿ ಕಾಂಗ್ರೆಸ್ ಹಿತಾಸಕ್ತಿಗಾಗಿ ಹಾಗೂ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತರಲು ಜೀವವನ್ನು ನೀಡಲಾಗುತ್ತಿದೆ. ಪ್ರಮುಖವಾಗಿ ಅಮಿತ್ ಶಾ ಅವರ ವರ್ಚಸ್ಸಿಗೆ ಧಕ್ಕೆಯುಂಟು ಮಾಡಲು ಎಂದು ತಿಳಿಸಿದ್ದಾರೆ.