ಬಹುಭಾಷಾ ನಟಿ, ಕಾಂಗ್ರೆಸ್ ವಕ್ತಾರೆ ಖುಷ್ಬೂ ಸುಂದರ್ ಅವರನ್ನು ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅವರ ನಿಜವಾದ ಹೆಸರು ನಖಟ್ ಖಾನ್ ಎಂದಾಗಿದ್ದು ಚಿತ್ರರಂಗದ ಎಂಟ್ರಿಯಲ್ಲಿ ತಮ್ಮ ಹೆಸರನ್ನು ಖುಷ್ಬೂ ಆಗಿ ಬದಲಿಸಿಕೊಂಡಿದ್ದರು.
ಖುಷ್ಬೂ ಅವರ ಮೂಲ ಹೆಸರನ್ನಿಟ್ಟುಕೊಂಡು ಬಿಜೆಪಿ ರಾಜಕೀಯವಾಗಿ ದಾಳಿ ಪ್ರಾರಂಭಿಸಿತ್ತು. ಅದಕ್ಕೆ ಖುಷ್ಬೂ ಅವರು ಟ್ವೀಟರ್ ನಲ್ಲಿ ಖಾತೆಯಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಖುಷ್ಬೂ ಸುಂದರ್...ಬಿಜೆಪಿಗಾಗಿ ನಖಟ್ ಖಾನ್ ಎಂದು ಟ್ವೀಟರ್ ಹ್ಯಾಂಡಲನ್ನು ಬದಲಾಯಿಸಿಕೊಂಡಿದ್ದಾರೆ.
ಬಿಜೆಪಿ ಖುಷ್ಬೂ ತಮ್ಮ ಗುರುತನ್ನು ಮರೆಮಾಚುತ್ತಿದ್ದಾರೆ. ಅವರು ತಮ್ಮ ಧರ್ಮವನ್ನು ಕೀಳಾಗಿ ನೋಡುತ್ತಿದ್ದಾರೆ. ಹೆಸರನ್ನು ಮುಚ್ಚಿಡುತ್ತಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟೀಕರಣ ನೀಡಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನವನ್ನೇ ಆರಂಭಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಖುಷ್ಬೂ ಅವರು ಸಮಸ್ಯೆಗಳನ್ನು ಪರಿಹರಿಸಬೇಕಾದ ನೇತಾರರು, ಬೇರೆಯವರ ವೈಯಕ್ತಿಕ ಜೀವನದಲ್ಲಿ ಇಣುಕಿ ನೋಡುತ್ತಾ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ನಖಟ್ ನನ್ನ ತಂದೆ ತಾಯಿ ಇಟ್ಟ ಹೆಸರು. ಧರ್ಮದ ಜತೆಗೆ ರಾಜಕೀಯ ಬೆರೆಸುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಅವರಿಗೆ ಬುದ್ಧಿ ಕಲಿಸಲು ಹೆಸರು ಬದಲಾಯಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.