6 ತಿಂಗಳ ಹಸಿಗೂಸಿನ ಮೇಲೆ ಅತ್ಯಾಚಾರ; ನ್ಯಾಯಾಲಯದ ಆವರಣದಲ್ಲೇ ಕಾಮುಕನಿದೆ ಹಿಗ್ಗಾಮುಗ್ಗಾ ಥಳಿತ!
ಇಂದೋರ್; 6 ತಿಂಗಳ ಹಸುಗೂಸನ್ನು ಅಪಹರಿಸಿ ಅತ್ಯಾಚಾರವೆಸಗಿ, ಬರ್ಬರವಾಗಿ ಹತ್ಯೆ ಮಾಡಿದ್ದ ಶಿಶುಕಾಮಿಗೆ ನ್ಯಾಯಾಲಯದ ಆವರಣದಲ್ಲಿಯೇ ಸಾರ್ವಜನಿಕರು ತಕ್ಕ ಶಾಸ್ತಿ ಮಾಡಿದ್ದಾರೆ.
ರಾಜ್ಕೋಟ್ ಸಮೀಪದ ಕಟ್ಟವೊಂದರ ನೆಲಮಹಡಿಯಲ್ಲಿ ಮಗುವಿನ ರಕ್ತಸಿಕ್ತ ಮೃತದೇಹ ಪತ್ತೆಯಾಗಿದ್ದು, ಮಧ್ಯರಾತ್ರಿಯಿಂದ ಕಾಣೆಯಾಗಿದ್ದ 6 ತಿಂಗಳ ಕಂದಮ್ಮ ಮಧ್ಯಾಹ್ನದ ವೇಳೆಗೆ ಶವವಾಗಿ ಪತ್ತೆಯಾಗಿತ್ತು.
ಪೋಷಕರ ದೂರಿನ ಅನ್ವಯ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದಾಗ ಧಾರುಣ ಘಟನೆ ಬೆಳಕಿಗೆ ಬಂದಿತ್ತು. ಪರಿಚಯಸ್ಥನೇ ಆಗಿದ್ದ ವ್ಯಕ್ತಿ ಮಗುವಿನ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದ.
ಇದರಂತೆ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದರು. ಈ ವೇಳೆ ಆಕ್ರೋಶಗೊಂಡಿದ್ದ ಜನರು ಆರೋಪಿಯನ್ನು ಪೊಲೀಸರ ಕೈಯಿಂದ ಎಳೆದು ತಂದು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.
ಕೆಲವರು ನ್ಯಾಯಾಲಯದ ಆವರಣದಲ್ಲಿ ಕೈಗೆ ಸಿಕ್ಕ ವಸ್ತುಗಳಿಂದ ಥಳಿಸಿದ್ದಾರೆ. ಬಳಿಕ ಪೊಲೀಸರು ಆತನನ್ನು ಆಕ್ರೋಶಿತ ಜನರಿಂದ ಪಾರು ಮಾಡಿ ನ್ಯಾಯಾಲಯಕ್ಕೆ ಹಾಜಕು ಪಡಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ.