ಸಂಗ್ರಹ ಚಿತ್ರ 
ದೇಶ

ಬಿಹಾರ, ಯುಪಿ, ರಾಜಸ್ತಾನ ಸೇರಿ ಐದು ರಾಜ್ಯಗಳಿಂದ ಭಾರತದ ಸಾಮಾಜಿಕ ಅಭಿವೃದ್ಧಿ ಕುಂಠಿತ: ನೀತಿ ಆಯೋಗ ಮುಖ್ಯಸ್ಥ

ಐದು ಪ್ರಮುಖ ರಾಜ್ಯಗಳಿಂದಾಗಿ ಭಾರತ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ನೀತಿ ಆಯೋಗ ಮಂಗಳವಾರ ಹೇಳಿದೆ.

ನವದೆಹಲಿ: ಐದು ಪ್ರಮುಖ ರಾಜ್ಯಗಳಿಂದಾಗಿ ಭಾರತ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ನೀತಿ ಆಯೋಗ ಮಂಗಳವಾರ ಹೇಳಿದೆ.
ದೆಹಲಿಯ ಜಾಮೀಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮೊದಲ ಖಾನ್‌ ಅಬ್ದುಲ್‌ ಗಫ‌ರ್‌ ಖಾನ್‌ ಮೆಮೋರಿಯಲ್ ನಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನೀತಿ ಆಯೋಗದ ಮುಖ್ಯಸ್ಥ ಅಮಿತಾಬ್ ಕಾಂತ್ ಅವರು, ಭಾರತ ಹಿಂದುಳಿದಿರುವಿಕೆಗೆ ಪ್ರಮುಖವಾಗಿ ಸಾಮಾಜಿಕ ಅಭಿವೃದ್ಧಿಯಲ್ಲಿ ದೇಶ ಹಿಂದುಳಿಯಲು ಪೂರ್ವ ಭಾರತದ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಛತ್ತೀಸ್ ಘಡ ಮತ್ತು ಮಧ್ಯ ಪ್ರದೇಶ ರಾಜ್ಯಗಳೇ ಕಾರಣ ಎಂದು ಹೇಳಿದ್ದಾರೆ.
'ವಿಶೇಷವಾಗಿ ಸಾಮಾಜಿಕ ಅಭಿವೃದ್ಧಿ ರಂಗದಲ್ಲಿ  ಭಾರತ ಹಿಂದುಳಿಯಲು ದೇಶದ ಪೂರ್ವ ಭಾಗದ ರಾಜ್ಯಗಳಾದ ಬಿಹಾರ, ಯುಪಿ, ಛತ್ತೀಸ್‌ಗಢ, ಎಂಪಿ, ಮತ್ತು ರಾಜಸ್ಥಾನ ರಾಜ್ಯಗಳೇ ಕಾರಣವಾಗಿವೆ. ಭಾರತ ಉದ್ಯಮ ಸೇರಿದತೆ ಇತರೆ ಅರ್ಥಿಕ ರಂಗದಲ್ಲಿ ಉತ್ತಮ ಪ್ರಗತಿಯನ್ನು ತೋರಿದೆಯಾದರೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದೆ. 188 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 131ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಆಫ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ ಎಂಬ ವಿಚಾರದ ಕುರಿತು ಮಾತನಾಡಿದ ಅಮಿತಾಬ್ ಕಾಂತ್ ಅವರು, ದಕ್ಷಿಣ ಮತ್ತು ಪಶ್ಚಿಮ ಭಾರತದ ರಾಜ್ಯಗಳು ಉತ್ತಮ ಫಲಿತಾಂಶ ನೀಡುತ್ತಿವೆ. ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿವೆ. ಹೀಗಾಗಿ ದೇಶ ಮಾನವ ಅಭಿವೃದ್ಧಿ ಸೂಚ್ಯಂಕದ ಸುಧಾರಣೆಯ ಕುರಿತು ಹೆಚ್ಚು ಗಮನ ಹರಿಸಬೇಕಿದೆ. ನಾವೂ ಕೂಡ ಜಿಲ್ಲಾವಾರು ಕಾರ್ಯಕ್ರಮಗಳು ಮೂಲಕ ಇದನ್ನು ಸಾಧಿಸಲು ಕಾರ್ಯತಂತ್ರ ರೂಪಿಸಿದ್ದೇವೆ. ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ವಿಚಾರಗಳಾಗಿದ್ದು, ಈ ಸಂಗತಿಗಳಲ್ಲೇ ಭಾರತ ಹೆಚ್ಚು ಹಿಂದುಳಿಯುತ್ತಿದೆ. 
ಶೈಕ್ಷಣಿಕ ವಿಭಾಗದಲ್ಲಿಯೂ ನಮ್ಮ ಸಾಧನೆ ಕಳಪೆಯಾಗಿದ್ದು. ಐದನೇ ತರಗತಿಯ ಬಾಲಕ 2ನೇ ತರಗತಿಯ ಗಣಿತ ಸಮಸ್ಯೆ ಪರಿಹರಿಸಲು ಸಾದ್ಯವಾಗುತ್ತಿಲ್ಲ ಎಂದಾಗ ನಾವು ಎಂತಹ ಪರಿಣಾಮಕಾರಿ ಶಿಕ್ಷಣ ನೀಡುತ್ತಿದ್ದೇವೆ ಎಂದು ತಿಳಿಯುತ್ತದೆ. ಐದನೇ ತರಗತಿ ಬಾಲಕ ತನ್ನ ಮಾತೃಭಾಷೆಯ ಪಠ್ಯ ಪುಸ್ತಕವನ್ನೇ ಓದಲು ಪರದಾಡುತ್ತಾನೆ. ಶಿಶು ಮರಣ ಪ್ರಮಾಣ ಹೆಚ್ಚಾಗುತ್ತಿದೆ.  ಇಂತಹ ಸೂಕ್ಷ್ಮ ವಿಚಾರಗಳಲ್ಲಿ ನಾವು ಸುಧಾರಣೆ ಕಾಣಲೇ ಬೇಕಿದೆ. ಇಲ್ಲವಾದರೆ ಅಭಿವೃದ್ಧಿ ಎಂಬುದು ಕಠಿಣವಾಗುತ್ತದೆ. ಅಂತೆಯೇ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರಿಗೂ ಸ್ಥಾನ ನೀಡಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ನೀತಿ ರೂಪಿಸಬೇಕು ಎಂದು ಅಮಿತಾಬ್ ಕಾಂತ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!