ದೇಶ

ಸುಪ್ರೀಂ ನ್ಯಾಯಾಧೀಶೆಯಾಗಿ ಇಂದು ಮಲ್ಹೋತ್ರಾ ನೇಮಕ

Lingaraj Badiger
ನವದೆಹಲಿ: ಹಿರಿಯ ವಕೀಲರಾದ ಇಂದು ಮಲ್ಹೋತ್ರಾ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹುದ್ದೆಗಾಗಿ ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಬುಧವಾರ ಅಂಗೀಕರಿಸಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ನೇರವಾಗಿ ನೇಮಕವಾಗುತ್ತಿರುವ ದೇಶದ ಮೊದಲ ಮಹಿಳಾ ವಕೀಲೆ ಎಂಬ ಗೌರವಕ್ಕೆ ಇಂದು ಮಲ್ಹೋತ್ರಾ ಪಾತ್ರರಾಗಿದ್ದಾರೆ.
ಇಂದು ಮಲ್ಹೋತ್ರಾ ಅವರು ಶುಕ್ರವಾರ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನ್ಯಾಯವಾದಿಗಳ ಕುಟುಂಬದಿಂದಲೇ ಬಂದಿರುವ ಇಂದು ಮಲ್ಹೋತ್ರಾ ಅವರ ತಂದೆ ಒ.ಪಿ. ಮಲ್ಹೋತ್ರಾ ಸಹ ಹಿರಿಯ ನ್ಯಾಯವಾದಿಗಳಾಗಿದ್ದು, ಅವರ ಹಿರಿಯ ಸೋದರ ಹಾಗೂ ಸೋದರಿ ಸಹ ವಕೀಲರಾಗಿದ್ದಾರೆ.
ಸ್ವಾತಂತ್ರ್ಯಾನಂತರ  ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೇರಲಿರುವ ಏಳನೇ ಮಹಿಳೆ ಇಂದು ಅವರಾಗಲಿದ್ದು, ಉಳಿದ ಆರು ಮಂದಿ ಹೈ ಕೋರ್ಟ್ ನಿಂದ ಭಡ್ತಿ ಪಡೆದವರಾಗಿದ್ದಾರೆ. 
ಇನ್ನು ಇದೇ ವೇಳೆ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಹೆಸರನ್ನೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ ಮಾಡಲಾಗಿದ್ದು. ಅದನ್ನು ತಡೆ ಹಿಡಿಯಲಾಗಿದೆ ಎಂದು ಪಿಟಿಐ ಮೂಲಗಳು ತಿಳಿಸಿವೆ. 
SCROLL FOR NEXT