ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜಸ್ಟೀಸ್ ಜೋಸೆಫ್ ಶಿಫಾರಸು ಮರುಪರಿಶೀಲಿಸುವಂತೆ 'ಸುಪ್ರೀಂ'ಗೆ ಕೇಂದ್ರ ಸರ್ಕಾರ ಮನವಿ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕೆ.ಎಂ.ಜೋಸೆಫ್ ಅವರಿಗೆ ಬಡ್ತಿ ನೀಡುವ ಕುರಿತು ಮಾಡಿರುವ ಶಿಫಾರಸನ್ನು...

ನ್ಯಾಯಮೂರ್ತಿ ಕೆ.ಎಂ.ಜೋಸೆಫ್
Sumana Upadhyaya
Updated On : 26 Apr 2018, 7:41 am

ನವದೆಹಲಿ: ಸುಪ್ರೀಂ ಕೋರ್ಟ್  ನ್ಯಾಯಮೂರ್ತಿಯಾಗಿ ಕೆ.ಎಂ.ಜೋಸೆಫ್ ಅವರಿಗೆ ಬಡ್ತಿ ನೀಡುವ ಕುರಿತು ಮಾಡಿರುವ ಶಿಫಾರಸನ್ನು ಮರುಪರಿಶೀಲಿಸುವಂತೆ ಸರ್ಕಾರ ಸುಪ್ರೀಂ ಕೋರ್ಟ್ ನ ಕೊಲ್ಜಿಯಂ(ನ್ಯಾಯಮಂಡಳಿ)ನ್ನು ಕೋರಿದೆ.

ನ್ಯಾಯಮೂರ್ತಿ ಜೋಸೆಫ್ ಅವರನ್ನು ಮೇಲಿನ ಸ್ಥಾನಕ್ಕೆ ವರ್ಗಾಯಿಸುವ ಬಗ್ಗೆ ವಸ್ತುನಿಷ್ಠ ನೋಟ ಸಿಗಬೇಕಾಗಿದೆ ಎಂದು ಸರ್ಕಾರ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್ ನ ನ್ಯಾಯಾಧೀಶೆಯಾಗಿ ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಸರ್ಕಾರ ಈ ಶಿಫಾರಸು ಮಾಡಿದೆ.ನ್ಯಾಯಮೂರ್ತಿ ಜೋಸೆಫ್ ಅವರಿಗೆ ಬಡ್ತಿ ನೀಡುವ ಆದೇಶವನ್ನು ತಡೆಹಿಡಿಯಲಾಗಿತ್ತು. ಇವರು ಉತ್ತರಾಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದಾರೆ. ಇವರಿಬ್ಬರ ಹೆಸರುಗಳನ್ನು ಈ ಹಿಂದೆ ಕೊಲ್ಜಿಯಂ ಸದಸ್ಯರು ಶಿಫಾರಸು ಮಾಡಿದ್ದರು.

ಜೋಸೆಫ್ ಹೆಸರನ್ನು ಶಿಫಾರಸು ಮಾಡದಿರುವ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ನ ಬಾರ್ ಅಸೋಸಿಯೇಷನ್ ಅಧ್ಯಕ್ಷರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಇದು ತೀರಾ ಆತಂಕಕಾರಿ ಸಂಗತಿ ಎಂದು ಬಣ್ಣಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement