ದೇಶ

ಐಎಸ್ಐ ಪ್ರಾಯೋಜಿತ ಹ್ಯಾಕರ್ ಗಳ ಜಾಲ ಪತ್ತೆ ಮಾಡಿದ ದೆಹಲಿ ಪೊಲೀಸ್

Srinivas Rao BV
ನವದೆಹಲಿ: ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಪ್ರಾಯೋಜಿತ ಹ್ಯಾಕರ್ ಗಳ ಇಂಟರ್ ನೆಟ್ ಜಾಲವನ್ನು ದೆಹಲಿಯ ವಿಶೇಷ ಪೊಲೀಸ್ ವಿಭಾಗ ಪತ್ತೆ ಮಾಡಿದ್ದಾರೆ. 
ಐಎಸ್ಐ ಪ್ರಾಯೋಜಿತ ಹ್ಯಾಕರ್ ಗಳು ಸರ್ಕಾರದ ವೆಬ್ ಸೈಟ್ ಗಳನ್ನು ನಾಶ ಮಾಡಿ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಗಳಲ್ಲಿ ದ್ವೇಷ ಹರಡುವ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಶ್ಮೀರಿ ಯುವಕರನ್ನು ಬಂಧಿಸಲಾಗಿದ್ದು ಉಳಿದ ಶಂಕಿತರಿಗಾಗಿ ಶೋಧಕಾರ್ಯ ನಡೆದಿದೆ. 
ದೇಶಧ್ರೋಹದ ಕಾಯ್ದೆಯ ಸೆಕ್ಷನ್ 124ಎ ಹಾಗೂ ಐಟಿ ಕಾಯ್ದೆಯ ಸೆಕ್ಷನ್ 66 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಬಿಟೆಕ್ ವಿದ್ಯಾರ್ಥಿ ಶಾಹಿದ್ ಮಲ್ಲಾ, ಆದಿಲ್ ಹುಸೇನ್ ಬಿಸಿಎ ವಿದ್ಯಾರ್ಥಿ ಬಂಧಿತರಾಗಿದ್ದಾರೆ. 
SCROLL FOR NEXT