ಕಠ್ಮಂಡು: ನೇಪಾಳದಲ್ಲಿ ಭಾರತದ ಸಹಕಾರದಿಂದ ಅಭಿವೃದ್ಧಿಪಡಿಸಿರುವ ಜಲವಿದ್ಯುತ್ ಯೋಜನೆಯ ಘಟಕದ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿದ್ದು, ಮೋದಿ ಭೇಟಿಗೂ ಮುನ್ನ ಈ ಘಟನೆ ನಡೆದಿದೆ.
ಕೆಲವೇ ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇಪಾಳಕ್ಕೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ಈ ಘಟನೆ ನಡೆದಿದೆ. ಕಠ್ಮಂಡುವಿನಿಂದ ಸುಮಾರು 500 ಕಿ.ಮೀ ದೂರದಲ್ಲಿರುವ ತುಮಲಿಂಗಾರ್ ಪ್ರದೇಶದಲ್ಲಿ ಭಾರತದ ಸಹಯೋಗದಲ್ಲಿ 900 ಮೆಗಾವ್ಯಾಟ್ ಅರುಣ್-III ಜಲವಿದ್ಯುತ್ ಯೋಜನೆಯ ಘಟಕದ ಕಚೇರಿಯ ಕಾಂಪೌಂಡ್ ಗೋಡೆಗೆ ಹಾನಿಗೊಳಗಾಗಿದೆ ಎಂದಿ ಅಲ್ಲಿನ ಅಧಿಕಾರಿ ಶಿವ ರಾಜ್ ಜೋಷಿ ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯೂ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2020 ರ ವೇಳೆಗೆ ಜಲವಿದ್ಯುತ್ ಯೋಜನೆಯ ಘಟಕ ಕಾರ್ಯಾರಂಭ ಮಾಡಲಿದೆ. ಮೇ.11 ರಂದು ಪ್ರಧಾನಿ ನರೇಂದ್ರ ಮೋದಿ ನೇಪಾಳಕ್ಕೆ ಭೇಟಿ ನೀಡಲಿದ್ದು, ಇದಕ್ಕೆ ಕೆಲವೇ ದಿನಗಳ ಮುನ್ನ ಈ ಘಟನೆ ನಡೆದಿದೆ.