ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವಿದೇಶಿ ನೆಲದಲ್ಲಿ ಭಾರತೀಯ ಸಂಗೀತ ಕೇಳುವುದು ಅತ್ಯುದ್ಭುತ ಕ್ಷಣ; ಪ್ರಧಾನಿ ಮೋದಿ

ವಿದೇಶಿ ನೆಲದಲ್ಲಿ ಭಾರತೀಯ ಸಂಗೀತ ಕೇಳುವುದು ಅತ್ಯುದ್ಭುತ ಕ್ಷಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...

ಪ್ರಧಾನಮಂತ್ರಿ ನರೇಂದ್ರ ಮೋದಿ
Manjula VN
Updated On : 29 Apr 2018, 11:32 am
ನವದೆಹಲಿ: ವಿದೇಶಿ ನೆಲದಲ್ಲಿ ಭಾರತೀಯ ಸಂಗೀತ ಕೇಳುವುದು ಅತ್ಯುದ್ಭುತ ಕ್ಷಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ವಿದೇಶಿ ಮಣ್ಣಿನಲ್ಲಿ ನಿಂತು ಭಾರತೀಯ ಸಂಗೀತವನ್ನು ಕೇಳುವುದು ಅತ್ಯುದ್ಭುತ ಕ್ಷಣವೆಂದೇ ಹೇಳಬಹುದು. ಪ್ರಮುಖವಾಗಿ ರಾಷ್ಟ್ರೀಯ ಗೀತೆಗಳನ್ನು ಹಾಡಿದಾಗ. ನಮ್ಮ ಕಲಾವಿದರು ಜಗತ್ತಿನಾದ್ಯಂತ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆಂದು ಹೇಳಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎರಡು ದಿನಗಳ ಕಾಲ ಚೀನಾಗೆ ಭೇಟಿ ನೀಡಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಕಾಲ ಕಳೆದರು. ಈ ವೇಳೆ ಮೋದಿಯವರಿಗಾಗಿ ಚೀನಾ ಕಲಾವಿದರು ಬಾಲಿವುಡ್ ಪ್ರಸಿದ್ಧ ಚಿತ್ರ ಏ ವಾದಾ ರಾಹಾ ಚಿತ್ರದ ಗೀತೆಯನ್ನು ಸಾಂಪ್ರದಾಯಿಕ ವಾದ್ಯ ಬಳಸಿಕೊಂಡು ನುಡಿಸಿದರು. ಇದನ್ನು ಕೇಳಿದ ಮೋದಿಯವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

Advertisement

Advertisement

1882ರ ರಿಷಿ ಕಪೂರ್, ಪೂನಮ್ ದಿಲ್ಹನ್ ಜೋಡಿಯ ಜನಪ್ರಿಯ ಬಾಲಿವುಡ್ ಚಿತ್ರ ಏ ವಾದಾ ರಾಹಾ ಚಿತ್ರದ 'ತು ತು ಹೆ ವಹೀ... ಹಾಡವನ್ನು ಚೀನಾ ಕಲಾವಿದರು ಪ್ರಸ್ತುತ ಪಡಿಸಿದ್ದರು. ಆರ್.ಡಿ. ಬರ್ಮನ್ ಸಂಗೀತ ಸಂಯೋಜನೆಯ ಈ ಗೀತೆಯನ್ನು ಕಿಶೋರ್ ಕುಮಾರ್ ಹಾಗೂ ಆಸಾ ಭೋಂಸ್ಲೆಯವರು ಹಾಡಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement