ತ್ರಿಪುರಾ ಸಿಎಂ 
ದೇಶ

ಎಲ್ಲ 74 ಚಿಟ್ ಫಂಡ್ ಕೇಸ್ ಗಳನ್ನು ಸಿಬಿಐ ತನಿಖೆಗೆ ವಹಿಸಲಾಗುವುದು- ತ್ರಿಪುರಾ ಸಿಎಂ

ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಎಲ್ಲ 74 ಚಿಟ್ ಫಂಡ್ ಪ್ರಕರಣಗಳನ್ನು ವಿಶೇಷ ತನಿಖಾ ತಂಡದಿಂದ ಸಿಬಿಐಗೆ ವಹಿಸಲಾಗುವುದು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಹೇಳಿದ್ದಾರೆ.

 ತ್ರಿಪುರಾ : ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಎಲ್ಲ 74 ಚಿಟ್ ಫಂಡ್  ಪ್ರಕರಣಗಳನ್ನು  ವಿಶೇಷ ತನಿಖಾ ತಂಡದಿಂದ ಸಿಬಿಐಗೆ ವಹಿಸಲಾಗುವುದು ಎಂದು  ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್   ಹೇಳಿದ್ದಾರೆ.

ರೋಸ್ ವ್ಯಾಲಿ, ರೆಸ್ ಪಾನ್ಸ್  ಸಮೂಹ, ಬಾಸಿಲ್ ಇಂಟರ್ ನ್ಯಾಷನಲ್, ಐ- ಕೋರ್ ಮತ್ತು ವಾರೀಸ್  ಸಂಮೂಹದ ಕಂಪನಿ ಸೇರಿದಂತೆ ಎಲ್ಲಾ 11  ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಬಿಐ ಒಪ್ಪಿಗೆ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.

 ಹಿಂದಿನ ಎಡಪಕ್ಷ ಸರ್ಕಾರ ಚಿಟ್  ಫಂಡ್ ಮೂಲಕ  ಜನರನ್ನು ಶೋಷಣೆ ಮಾಡಿದೆ .ಯಾವುದೇ ಆಕ್ಷೇಪಣೆ ಇಲ್ಲದೆ ಪ್ರಮಾಣ ಪತ್ರ ಹಾಗೂ  ಪರವಾನಗಿ ನೀಡಲಾಗಿದೆ  ಎಂದು  ಬಿಪ್ಲಾಬ್ ಕುಮಾರ್ ದೇಬ್    ಆರೋಪಿಸಿದ್ದಾರೆ.

2008ರಲ್ಲಿ ಅಮ್ಯೂಸ್ ಮೆಂಟ್ ಪಾರ್ಕಿನಲ್ಲಿರುವ ರೊಸ್ ವ್ಯಾಲಿ ಸಮೂಹಗ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಪಾಲ್ಗೊಂಡಿದ್ದಾರೆ. ತದನಂತರ ಆ ಕಂಪನಿ ಚಿಟ್ ಫಂಡ್ ಕಂಪನಿ ಎಂಬುದು ತಮ್ಮಗೆ ಗೊತ್ತಿರಲಿಲ್ಲ ಎಂದು ಹೇಳುತ್ತಾರೆ ಎಂದು ಸರ್ಕಾರ್ ಅವರನ್ನು ಟೀಕಿಸಿದ್ದಾರೆ.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!