ದೇಶ

ಯುಪಿಎ ಸರ್ಕಾರದ ವಿದ್ಯುತ್ ಯೋಜನೆಯ ಕ್ರೆಡಿಟ್ ಮೋದಿ ಸರ್ಕಾರಕ್ಕೆ: ಕಾಂಗ್ರೆಸ್

Shilpa D
ನವದೆಹಲಿ:  ನಿಗದಿ ಮಾಡಿದ್ದ ಗಡುವಿಗೆ ಇನ್ನೂ 12 ದಿನಗಳು ಬಾಕಿ ಇರುವಂತೆಯೇ ದೇಶದ ಎಲ್ಲ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ ಯೋಜನೆಯ ಕ್ರೆಡಿಟ್ ಅನ್ನು ಮೋದಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. 
ಯುಪಿಎ ಸರ್ಕಾರದ ಅವಧಿಯಲ್ಲಿ  ಭಾರತದಲ್ಲಿ 6,49,867 ಗ್ರಾಮಗಳಿದ್ದವು, ಅದರಲ್ಲಿ 2004-2014ರ ವರೆಗಿನ ಅಢಳಿತಾವದಿಯಲ್ಲಿ 1,07,600 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು, ಕಳೆದ 60 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್  ಪ್ರತಿ ವರ್ಷ 10 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿತ್ತು, ಪವರ್ ಫುಲ್ ಇಂಡಿಯಾ ರೂಪಿಸಿದ್ದು ಕಾಂಗ್ರೆಸ್ ಆದರೆ ಅದರ ಕ್ರೆಡಿಟ್ ತೆಗೆದುಕೊಳ್ಳುತ್ತಿರುವುದು ಬಿಜೆಪಿ ಎಂದು ಕಾಂಗ್ರೆಸ್ ವಕ್ತಾರ ರಂಜೀತ್ ಸಿಂಗ್ ಸರ್ಜೆವಾಲಾ ಅರೋಪಿಸಿದ್ದಾರೆ.
ಆತ್ಮೀಯ ಮೋದಿ ಮತ್ತಿ ಪಿಯೂಷ್ ಗೊಯೆಲ್ ಅವರೇ ಮೇ26 2014 ರಂದು ಕೇವಲ 18,452 ಗ್ರಾಮಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿರಲಿಲ್ಲ, ಸರಾಸರಿ 4, 813 ಗ್ರಾಮಗಳಿಗೆ  ವಿದ್ಯುತ್ ಸಂಪರ್ಕ ಕಲ್ಪಿಸಲು ಬಿಜೆಪಿ ಸರ್ಕಾರ 46 ತಿಂಗಳು ತೆಗೆದುಕೊಂಡಿದೆ.
ನಕಲಿ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಬಿಜೆಪಿ, ಅಸಮರ್ಥತೆಯನ್ನು ಆಚರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ, 
SCROLL FOR NEXT