ಸಂಗ್ರಹ ಚಿತ್ರ 
ದೇಶ

ಬಸ್‌ಗಾಗಿ ಕಾಯುತ್ತಿದ್ದವರಿಗೆ ಯಮ ಸ್ವರೂಪಿಯಾಗಿ ಬಂದು ಕಾರು ಡಿಕ್ಕಿ, 7 ಮಂದಿ ದುರ್ಮರಣ!

ಬಸ್‌ಗಾಗಿ ಕಾಯುತ್ತಿದ್ದವರಿಗೆ ಯಮ ಸ್ವರೂಪಿಯಾಗಿ ಬಂದ ಎಸ್ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ಕೊಯಂಬತ್ತೂರಿನ ಸುಂದರಾಪುರಂನಲ್ಲಿ ಸಂಭವಿಸಿದೆ...

ಕೊಯಂಬತ್ತೂರ್: ಬಸ್‌ಗಾಗಿ ಕಾಯುತ್ತಿದ್ದವರಿಗೆ ಯಮ ಸ್ವರೂಪಿಯಾಗಿ ಬಂದ ಎಸ್ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ಕೊಯಂಬತ್ತೂರಿನ ಸುಂದರಾಪುರಂನಲ್ಲಿ ಸಂಭವಿಸಿದೆ. 
ಜಗದೀಶ್ ಎಂಬಾತ ಎಸ್ಯುವಿ ಆಡಿ ಕಾರಿನಲ್ಲಿ ಪೊಲ್ಲಾಚಿಯಿಂದ ಕೊಯಂಬತ್ತೂರಿಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪೆರಿಯಾರ್ ಬಸ್ ನಿಲ್ದಾಣಕ್ಕೆ ನುಗ್ಗಿದೆ. ಈ ವೇಳೆ ಬಸ್ ಗಾಗಿ ಕಾಯುತ್ತಿದ್ದವರ ಮೇಲೆ ಕಾರು ಹರಿದಿದ್ದು ಸ್ಥಳದಲ್ಲೇ ಏಳು ಮಂದಿ ಸಾವನ್ನಪ್ಪಿದ್ದಾರೆ. 
ವೇಗವಾಗಿ ಬಂದ ಕಾರು ಬಸ್ ನಿಲ್ದಾಣದ ಬಳಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದೆ. ನಂತರ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹೂವಿನ ಅಂಗಡಿಗೆ ನುಗ್ಗಿದೆ. 
ಅಪಘಾತದಲ್ಲಿ ಮೃತಪಟ್ಟವರನ್ನು ಸೋಮು(55), ಸುರೇಶ್(43), ಹಂಸವೇಣಿ(30), ಸುಭಾಷಿಣಿ(20), ಶ್ರೀರಂಗದಾಸ್(75) ಮತ್ತು ಕುಪ್ಪಮಲ್(60) ಎಂದು ಗುರುತಿಸಲಾಗಿದೆ. ಇನ್ನು ಆಟೋದಲ್ಲಿ ಕುಳಿತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!