ದೇಶ

'ನಾನು ಅವಕಾಶವಾದಿಯಲ್ಲ ' ರಾಜಕೀಯ ಪ್ರವೇಶ ಕುರಿತು ಕಮಲ್ ಹಾಸನ್ ಹೇಳಿಕೆ

Nagaraja AB

ಚೆನ್ನೈ : ಅವಕಾಶ ಇದ್ದ ವೇಳೆಯಲ್ಲಿ ರಾಜಕೀಯಕ್ಕೆ ಆಗಮಿಸಿದ್ದೇನೆ. ಆದರೆ. ನಾನು ಅವಕಾಶವಾದಿಯಲ್ಲ ಎಂದು ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಮಕ್ಕಳ್ ನಿಧಿ ಮೈಮ್ ರಾಜಕೀಯ ಪಕ್ಷ ಸ್ಥಾಪಿಸಿದ ಕಮಲ್ ಹಾಸನ್,  ನನ್ನ ಮುಂದಿನ ಜೀವನವನ್ನು ರಾಜಕೀಯದಲ್ಲಿ ಕಾಣುತಿಲ್ಲ. ಆದರೆ. ತನ್ನ ಅಸ್ತಿತ್ವಕ್ಕೆ ಏನಾದರೂ ಅಗತ್ಯತೆ ಇರಬೇಕಾಗುತ್ತದೆ ಎಂದಿದ್ದಾರೆ.

2000ರಲ್ಲಿ ಹೇ ರಾಮ್ ಚಿತ್ರ ಮಾಡುತ್ತಿದ್ದಾಗಲೂ ಚಿಂತನೆ ನಡೆಸಿದೆ.  ಆದರೆ, ತನ್ನ ಪಕ್ಷದ ಸಂಬಂಧಗಳನ್ನು ಬಹಿರಂಗಪಡಿಸದಿರಲು ಎಚ್ಚರಿಕೆಯಿಂದ ಇದಿದ್ದಾಗಿ  ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಮಲ್ ಹಾಸ್ ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದು, ಅವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್ ರಾಜಕೀಯದಲ್ಲಿ  ಏನು ಬೇಕಾದರೂ ಆಗಬಹುದು ಎಂದಿದ್ದಾರೆ.

ತಮಿಳುನಾಡುನಲ್ಲಿ ಯಾವುದೇ ಸರಿ ಎಂಬುದನ್ನು ಪತ್ತೆ ಹಚ್ಚುತ್ತೇವೆ.  ಯಾರು ಉತ್ತಮ ಕೆಲಸ ಮಾಡುತ್ತಾರೋ ಅಂತಹವರನ್ನು ಬೆಂಬಲಿಸಬೇಕು, ಯಾರು ಕೆಲಸ ಮಾಡುವುದಿಲ್ಲವೋ ಅಂತಹವರು ಹೋಗಬೇತು. ನನ್ನ ಮೈತ್ರಿ ಬಗ್ಗೆ ಗೊತ್ತಿದೆ ಎಂದು ಹೇಳಿದ್ದರು.

ಬಿಜೆಪಿಯನ್ನು ಪ್ರತ್ಯೇಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುತ್ತೀರಾ ಎಂಬ ವದಂತಿ ಕುರಿತು ಪ್ರತಿಕ್ರಿಯಿಸಿದ ಅವರು,  ತಮ್ಮ ನಂಬಿಕೆ ಮತ್ತು ಸಿದ್ದಾಂತ ಪರಿಪೂರ್ಣವಾಗಿದೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತೇನೆ. ಭ್ರಷ್ಟಾಚಾರ ಮುಕ್ತ ತಮಿಳುನಾಡು ತಮ್ಮ ಪ್ರಮುಖ ಸವಾಲು ಆಗಿದೆ ಎಂದು 63 ವರ್ಷದ ಕಮಲ್ ಹಾಸನ್ ಹೇಳಿದ್ದಾರೆ.

SCROLL FOR NEXT