ಚೆನ್ನೈ: ಡಿಎಂಕೆ ಮುಖಂಡ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಹಲವಾರು ಅಭಿಮಾನಿಗಳು ಅಘಾತಕ್ಕೊಳಗಾಗಿದ್ದು, ಈ ವರೆಗೂ 21 ಜನರು ಆಘಾತದಿಂದ ಸಾವನ್ನಪ್ಪಿದ್ದಾರೆ.
ಈ ಮಾಹಿತಿಯನ್ನು ಸ್ವತಃ ಡಿಎಂ ಕೆ ಪಕ್ಷವೇ ನೀಡಿದ್ದು, ಕರುಣಾನಿಧಿ ಅವರ ಆರೊಗ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಯಾವುದೇ ಅನಾಹುತ ಮಾಡಿಕೊಳ್ಳಬಾರದು ಎಂದು ಡಿಎಂಕೆ ಹೇಳಿದೆ. ಕರುಣಾನಿಧಿ ಅವರ ಅನಾರೋಗ್ಯ ಸುದ್ದಿಯನ್ನು ಕೇಳಿ ನಮ್ಮ ಪಕ್ಷದ 21 ಕಾರ್ಯಕರ್ತರು ಸಾವನ್ನಪ್ಪಿರುವುದನ್ನು ತಿಳಿದು ನೋವುಂಟಾಗಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂಕೆ ಸ್ಟ್ಯಾಲಿನ್ ಹೇಳಿದ್ದಾರೆ.
21 ಕಾರ್ಯಕರ್ತರ ಕುಟುಂಬ ಸದಸ್ಯರಿಗೆ ಸ್ಟ್ಯಾಲಿನ್ ಸಾಂತ್ವನ ಹೇಳಿದ್ದಾರೆ. ಆದರೆ ಮೃತ ದುರ್ದೈವಿಗಳ ಹೆಸರನ್ನು ಡಿಎಂಕೆ ಬಹಿರಂಗಗೊಳಿಸಿಲ್ಲ. ಕರುಣಾನಿಧಿ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಸ್ಟ್ಯಾಲಿನ್ ಇದೇ ವೇಳೆ ತಿಳಿಸಿದ್ದಾರೆ.