ದೇಶ

ತನಿಖಾ ಪ್ರಗತಿಯೇ ಇಲ್ಲ; ದಾಬೋಲ್ಕರ್, ಪನ್ಸಾರೆ ಕೊಲೆ ಪ್ರಕರಣ ಸಂಬಂಧ ಸಿಬಿಐ, ಎಸ್ ಐಟಿಗೆ 'ಹೈ' ತರಾಟೆ

Srinivasamurthy VN
ಮುಂಬೈ: ಖ್ಯಾತ ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೇ ಹೈಕೋರ್ಟ್ ಸಿಬಿಐ ಮತ್ತು ಎಸ್ ಐಟಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣ ಸಂಬಂಧ ಉಭಯ ತನಿಖಾ ಸಂಸ್ಥೆಗಳು ಸಲ್ಲಿಕೆ ಮಾಡಿದ್ದ ತನಿಖಾ ಪ್ರಗತಿ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್ ತನಿಖಾ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಈ ಹಿಂದಿನ ತನಿಖಾ ವರದಿಗೂ ಈಗ ಸಲ್ಲಿಕೆ ಮಾಡಿರುವ ತನಿಖಾ ಪ್ರಗತಿ ವರದಿಗೂ ಅಂತಹ ವ್ಯತ್ಯಾಸಗಳೇನೂ ಇಲ್ಲ. ತನಿಖೆ ನಿಧಾನಗತಿಯಲ್ಲಿ ಸಾಗಿದೆ ಎಂದು ಹೈಕೋರ್ಟ್ ಕಿಡಿಕಾರಿದೆ.
ಇನ್ನು ಸಿಬಿಐ ಮತ್ತು ಎಸ್ ಐಟಿ ಸಲ್ಲಿಕೆ ಮಾಡಿರುವ ತನಿಖಾ ಪ್ರಗತಿ ವರದಿಯಲ್ಲಿ ದಾಬೋಲ್ಕರ್, ಪನ್ಸಾರೆ ಮತ್ತು ಕರ್ನಾಟಕದ ವಿಚಾರವಾದಿ ಎಂಎಂ ಕಲ್ಬುರ್ಗಿ ಹತ್ಯೆ ಬಳಸಲಾಗಿರುವ ಗನ್ ಒಂದೇ ಎಂದು ಶಂಕಿಸಲಾಗಿದೆ. ಇದೇ ವಿಚಾರವನ್ನು ಉಭಯ ತನಿಕಾ ತಂಡಗಳು ಕೋರ್ಟ್ ಗೆ ಹೇಳಿದ್ದು, ಇದರಿಂದ ಸಂತುಷ್ಟಗೊಳ್ಳದ ಕೋರ್ಟ್ ತನಿಖೆಯನ್ನು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
2013ರ ಆಗಸ್ಟ್ 20ರಂದು ನರೇಂದ್ರ ದಾಬೋಲ್ಕರ್ ಅವರನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಹಾಕಿದ್ದರು. ಅಂತೆಯೇ ಕರ್ನಾಟಕದ ವಿಚಾರವಾದಿ ಎಂಎಂ ಕಲ್ಬುರ್ಗಿ ಅವರನ್ನೂ ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
SCROLL FOR NEXT