ದೇಶ

ಪೇಟದ ಗಾತ್ರವೂ ಸಿಖ್ ಧರ್ಮದ ಭಾಗವೇ?: ಸುಪ್ರೀಂ ಕೋರ್ಟ್: ಹೀಗೆ ಕೇಳಲು ಕಾರಣವೇನು ಗೊತ್ತೇ?

Srinivas Rao BV
ನವದೆಹಲಿ: ಸಿಖ್ ಧರ್ಮದಲ್ಲಿ ಪುರುಷರು ಧರಿಸುವ ಪೇಟದ ಗಾತ್ರವೂ ಸಹ ಸಿಖ್ ಧರ್ಮದ ಭಾಗವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ
ಸಿಖ್ ಧರ್ಮದಲ್ಲಿ ಎರಡು ವಿಧವಾದ ಪೇಟಗಳಿದ್ದು, ಟಾಪ್ ನಾಟ್ (ಅರ್ಧ) ಪೇಟವನ್ನು ಸಿಖ್ ಅಥ್ಲೀಟ್ ಗಳು ಧರಿಸುವುದಕ್ಕೆ ಸಾಧ್ಯವಿಲ್ಲವೇ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.  ಸೈಕ್ಲಿಂಗ್ ನಂತಹ ಕ್ರೀಡೆಗಳಲ್ಲಿ ಹೆಲ್ಮೆಟ್ ಕಡ್ಡಯವಾಗಿದ್ದು, ಸಿಖ್ ಅಥ್ಲೀಟ್ ಗಳಿಗೆ ಪೂರ್ತಿ ಇರುವ ಪೇಟವನ್ನು ಧರಿಸಿ ಹೆಲ್ಮೆಟ್ ನ್ನೂ ಧರಿಸುವುದು ಸಾಧ್ಯವಿಲ್ಲ. ಆದರೆ ಅರ್ಧ ಇರುವ ಪೇಟವನ್ನು ಧರಿಸಿದರೆ ಹೆಲ್ಮೆಟ್ ಧರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಶ್ನೆ ಕೇಳಿದೆ. 
ಭಾರತದಲ್ಲಿ ಹಲವು ಅಥ್ಲೀಟ್ ಗಳು ಪಟ್ಕಾ(ಅರ್ಧ ಪೇಟ) ಧರಿಸಿ ಆಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ನಾವು ಆತಂಕಗೊಂಡಿದ್ದೇವೆ, ಅದಿಲ್ಲದೇ ಇದ್ದಿದ್ದರೆ ಸಿಖ್ ಸಮುದಾಯದವರು ಹೆಲ್ಮೆಟ್ ನ್ನು ಧರಿಸುವ ಅಗತ್ಯವಿಲ್ಲ ಎಂದಿರುವ ನ್ಯಾ. ಬಾಬ್ಡೆ ಹಾಗೂ ನ್ಯಾ. ಎಲ್ ನಾಗೇಶ್ವರ್ ರಾವ್ ಅವರಿದ್ದ ವಿಭಾಗೀಯ ಪೀಠ,  ಸಿಖ್ ಧರ್ಮದಲ್ಲಿ ನಿರ್ದಿಷ್ಟ ಗಾತ್ರದ ಪೇಟ ಧರಿಸುವುದು ಧರ್ಮದ ಭಾಗವಾಗಿದೆಯೇ ಎಂಬುದನ್ನು ತಾನು ತಿಳಿಯಬೇಕಿದೆ ಎಂದು ಹೇಳಿದೆ. 
ಮಿಲ್ಖಾ ಸಿಂಗ್. ಬಿಶನ್ ಸಿಂಗ್ ಬೇಡಿ ಅವರನ್ನು ಸಿಖ್ ಅಥ್ಲೀಟ್ ಗಳಿಗೆ ಸುಪ್ರೀಂ ಕೋರ್ಟ್ ಉದಾಹರಣೆಯಾಗಿ ನೀಡಿದೆ. 
SCROLL FOR NEXT