ನವದೆಹಲಿ: ಜಮ್ಮು - ಕಾಶ್ಮೀರ ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆಯಾಗಿ ಗೀತಾ ಮಿತ್ತಲ್ ನೇಮಕವಾಗಿದ್ದಾರೆ.
ಸದ್ಯ ದೆಹಲಿ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದರು. ಗೀತಾ ಮಿತ್ತಲ್ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ಜುಲೈ 16 ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ಜಮ್ಮು ಕಾಶ್ಮೀರ ಹೈಕೋರ್ಟ್ ಗೆ ಗೀತ್ ಮಿತ್ತಲ್ ಅವರ ಹೆಸರನ್ನು ಶಿಫಾರಸು ಮಾಡಿತ್ತು.
ದೆಹಲಿ ಹೈಕೋರ್ಟ್ನ ಮá-ಖ್ಯ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ಗೀತಾ ಮಿತ್ತಲ್ ಜನಿಸಿದ್ದು 1958ರ ಡಿಸೆಂಬರ್ 9ರಂದು. ದೆಹಲಿಯ ಶ್ರೀರಾಮ್ ಮಹಿಳಾ ಕಾಲೇಜಿನಲ್ಲಿ ಪದವಿ ಪಡೆದ ಇವರು, 1981ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಗಳಿಸಿದರು. 2004ರಲ್ಲಿ ದೆಹಲಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡ ಮಿತ್ತಲ್ ಅವರ ಸ್ಥಾನವನ್ನು 2006ರಲ್ಲಿ ಕಾಯಂಗೊಳಿಸಲಾಯಿತು.