ಪ್ರತಿಷ್ಠಿತ ಟೆಲಿಕಾಂ ಸಂಸ್ಥೆ ಏರ್ ಟೆಲ್ ವಿರುದ್ಧ ಕಳ್ಳತನದ ಆರೋಪ, ಪ್ರಕರಣ ದಾಖಲು!
ಶ್ರೀನಗರ: ಪ್ರತಿಷ್ಠಿತ ಟೆಲಿಕಾಂ ಸಂಸ್ಥೆ ಏರ್ ಟೆಲ್ ವಿರುದ್ಧ ಪೊಲೀಸರು ಕಳ್ಳತನದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ನಿಂದ ವಿದ್ಯುತ್ ಕಳ್ಳತನ ಮಾಡುತ್ತಿದೆ ಎಂದು ಸಾರ್ವನಿಕ ಕ್ಷೇತ್ರದ ಟೆಲಿಕಾಂ ಸಂಸ್ಥೆ ದೂರು ದಾಖಲಿಸಿದ್ದು, ಪೊಲೀಸರು ಏರ್ ಟೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಎಸ್ಎನ್ಎಲ್ ಸಂಸ್ಥೆ ಬಳಕೆ ಮಾಡುತ್ತಿರುವ ಟ್ರಾನ್ಸ್ಫಾರ್ಮರ್ ನಿಂದ ಏರ್ ಟೆಲ್ ಸಂಸ್ಥೆ ತನ್ನ ಟವರ್ ಗಾಗಿ ವಿದ್ಯುತ್ ಕಳ್ಳತನ ಮಆಡುತ್ತಿದೆ ಎಂದು ಆ.03 ರಂದು ಬಿಎಸ್ಎನ್ಎಲ್ ಸಂಸ್ಥೆ ದೂರು ನೀಡಿತ್ತು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಏರ್ ಟೆಲ್ ಟವರ್ ನ್ನು ಬಿಎಸ್ಎನ್ಎಲ್ ಟ್ರಾನ್ಸ್ಫಾರ್ಮರ್ ಗೆ ಅಕ್ರಮವಾಗಿ ಕನೆಕ್ಟ್ ಮಾಡಲಾಗಿರುವುದು ಕಂಡುಬಂದಿದೆ,
ವಿದ್ಯುತ್ ಕಾಯ್ದೆಯ ಸೆಕ್ಷನ್ 95 ರ ಅಡಿಯಲ್ಲಿ ಏರ್ ಟೆಲ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics