ದೇಶ

ರಾಜಕೀಯ ಹೊರಗಿಟ್ಟು, ಸಂಸತ್ ನಲ್ಲಿ ಜನರ ಅಭಿವೃದ್ಧಿಗಾಗಿ ಶ್ರಮಿಸಿ: ಉಪರಾಷ್ಟ್ರಪತಿ ನಾಯ್ಡು

Srinivasamurthy VN
ನವದೆಹಲಿ: ಸುಖಾ ಸುಮ್ಮನೆ ನಿರರ್ಥಕ ವಿಚಾರಗಳಿಗಾಗಿ ಸಂಸತ್ ಕಲಾಪದಲ್ಲಿ ಗಲಾಟೆ ಮಾಡುವ ಪುಂಡ ಮತ್ತು ಮೊಂಡು ಶಾಸಕರಿಗೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯನಾಯ್ಡು ಅವರು ಕಿವಿ ಹಿಡಿದ್ದಾರೆ.
ಶನಿವಾರ ನಡೆದ ಕಲಾಪದಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ವೆಂಕಯ್ಯನಾಯ್ಡು ಅವರು, ಸಂಸತ್ ನಲ್ಲಿ ರಾಜಕೀಯ ವಿಚಾರಗಳ ಚರ್ಚೆ ಬೇಡ. ರಾಜಕೀಯವನ್ನು ಸಂಸತ್ ನಿಂದ ಹೊರಗಿಟ್ಟು ಕಲಾಪದಲ್ಲಿ ನಿಮ್ಮನ್ನು ಆರಿಸಿದ ಪ್ರಜೆಗಳಿಗಾಗಿ ಕಾರ್ಯನಿರ್ವಹಿಸಿ. ಸುಖಾಸುಮ್ಮನೆ ಗದ್ದಲದಿಂದ ಕಲಾಪಕ್ಕೆ ಅಡ್ಡಿಪಡಿಸಬೇಡಿ. ಆ ಮೂಲಕ ಸಂಸತ್ ಅಮೂಲ್ಯ ಸಮಯವನ್ನು ಹಾಳು ಮಾಡಬೇಡಿ ಎಂದು ಹೇಳಿದ್ದಾರೆ.
ಅಧಿವೇಶನದಲ್ಲಿ ಎಲ್ಲ ಸಂಸದರೂ ಶಿಸ್ತು ಪಾಲಿಸಬೇಕು. ಸಂಸದರು ಶಿಸ್ತು ಮರೆತರೆ ನನಗೆ ಕೋಪ ಬರುತ್ತದೆ. ಸಂಸದರು ಸದನದ ಭಾವಿಗಿಳಿದು ಪ್ರತಿಭಟನೆ ನಡೆಸುವುದು ಸರಿಯಲ್ಲ. ಅತ್ಯಮೂಲ್ಯವಾದ ಸಂಸತ್ ಸಮಯವನ್ನು ಯಾರೂ ಹಾಳು ಮಾಡಬಾರದು. ನಮ್ಮಲ್ಲಿ ಪರಸ್ಪರ ಗೌರವ ಇರಬೇಕು. ಪ್ರಜೆಗಳ ನಿರ್ಣಯವನ್ನು ನಾವು ಗೌರವಿಸಬೇಕು ಎಂದು ಹೇಳಿದರು.
SCROLL FOR NEXT