ಮಥುರಾ: ದುಷ್ಕರ್ಮಿಗಳು ಉತ್ತರ ಪ್ರದೇಶದ ಮಥುರಾ ಬಿಜೆಪಿ ಶಾಸಕ ಪೂರಾನ್ ಪ್ರಕಾಶ್ ಮೇಲೆ ಕಲ್ಲೆಸೆದು ದಾಳಿ ಮಾಡಿದ್ದು ಇದರಿಂದ ತಪ್ಪಿಸಿಕೊಳ್ಳಲು ಶಾಸಕರು ಜನರ ಬಳಿಗೆ ಓಡಿ ಹೋಗಿದ್ದಾರೆ.
ಶಾಸಕ ಪೂರಾನ್ ಪ್ರಕಾಶ್ ಕಾರಿನಲ್ಲಿ ಕುಳಿತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಇದರಿಂದ ಕಾರಿನ ವಿಂಡ್ ಶೀಲ್ಡ್ ಒಡೆದಿದೆ. ಕೂಡಲೇ ಎಚ್ಚೇತ್ತ ಶಾಸಕರು ಜನಸಂದಣಿ ಇರುವ ಪ್ರದೇಶಕ್ಕೆ ಕಾರನ್ನು ವೇಗವಾಗಿ ಚಲಾಯಿಸುವಂತೆ ಚಾಲಕನಿಗೆ ತಿಳಿಸಿದ್ದಾರೆ.
ತಮ್ಮ ಮೇಲೆ ಇದು ಮೂರನೇ ಬಾರಿಗೆ ದಾಳಿಯಾಗುತ್ತಿದ್ದು ದೇವರ ದಯೆಯಿಂದ ಪಾರಾಗಿದ್ದೇನೆ ಎಂದು ಪೂರಾನ್ ಪ್ರಕಾಶ್ ಹೇಳಿದ್ದಾರೆ.
ದಾಳಿಯಲ್ಲಿ ಪೂರಾನ್ ಪ್ರಕಾಶ್ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದೇವೆ ಎಂದು ಮಥುರಾ ಎಸ್ ಪಿ ಬಾಬ್ಲೂ ಕುಮಾರ್ ತಿಳಿಸಿದ್ದಾರೆ.