ದೇಶ

ಅಮೆರಿಕಾದಲ್ಲಿ ಭಾರತೀಯ ವ್ಯಕ್ತಿ ಮೇಲೆ ಹಲ್ಲೆ: ಸ್ವದೇಶಕ್ಕೆ ವಾಪಸ್ ತೆರಳಲು ಸೂಚನೆ!

Srinivas Rao BV
ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದ್ದು, "ನಿಮ್ಮ ದೇಶಕ್ಕೆ ವಾಪಸ್ ಹೋಗು" ಎಂದು ಹೇಳಲಾಗಿದೆ. 
ಘಟನೆಯನ್ನು ದ್ವೇಷ ಪೂರಿತ ಅಪರಾಧ ಪ್ರಕರಣ ಎಂದು ಪರಿಗಣಿಸಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.  ಕಳೆದ ವಾರ ಈ ಘಟನೆ ನಡೆದಿದೆ. ಸಿಖ್ ಸಮುದಾಯದ ಮೇಲೆ ನಡೆದಿರುವ ಈ ಹಲ್ಲೆ ಪ್ರಕರಣವನ್ನು ದ್ವೇಷ ಪೂರಿತ ಅಪರಾಧ ಪ್ರಕರಣ ಎಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
ಸ್ಥಳೀಯರಿಗಾಗಿ ಸೂಚನಾ ಫಲಕವನ್ನು ಹಾಕುತ್ತಿದ್ದಾಗ ಸಿಖ್ ಸಮುದಾಯದ 50 ವರ್ಷದ ವ್ಯಕ್ತಿಯ ಮೇಲೆ ಇಬ್ಬರು ವ್ಯಕ್ತಿಗಳು ಬಂದು ಹಲ್ಲೆ ಮಾಡಿದ್ದಾರೆ, ಅಷ್ಟೇ ಅಲ್ಲದೇ ನಿನಗೆ ಇಲ್ಲಿ ಸ್ವಾಗತವಿಲ್ಲ, ನಿನ್ನ ದೇಶಕ್ಕೆ ವಾಪಸ್ ಹೋಗು ಎಂದು ಹೇಳಿದ್ದು, ಟ್ರಕ್ ಮೇಲೆ ಸ್ಪ್ರೇ ಮಾಡಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT