ದೇಶ

ಪ್ರತಿ 6 ಗಂಟೆಗೊಮ್ಮೆ ಓರ್ವ ಯುವತಿ ಮೇಲೆ ಅತ್ಯಾಚಾರ, ಏನಾಗುತ್ತಿದೆ ದೇಶದಲ್ಲಿ?: ಸುಪ್ರೀಂ ಪ್ರಶ್ನೆ

Srinivas Rao BV
ನವದೆಹಲಿ: ಪ್ರತಿ 6 ಗಂಟೆಗೊಮ್ಮೆ ಓರ್ವ ಯುವತಿಯ ಮೇಲೆ ಅತ್ಯಾಚಾರ ನಡೆಯುತ್ತಿದೆ, ಏನಾಗುತ್ತಿದೆ ದೇಶದಲ್ಲಿ ಎಂದು ಸುಪೀಂ ಕೋರ್ಟ್ ಕೇಳಿದೆ.
ಪ್ರತಿ ನಿತ್ಯ ನಡೆಯುತ್ತಿರುವ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಎನ್ ಸಿಆರ್ ಬಿ ಡಾಟಾದ ಪ್ರಕಾರ ಪ್ರತಿ 6 ಗಂಟೆಗೆ ಓರ್ವ ಯುವತಿ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ 38,000 ಅತ್ಯಾಚಾರ ಪ್ರಕರಣಗಳು ನಡೆದಿವೆ. ಅತ್ಯಾಚಾರ ಪ್ರಕರಣಗಳಲ್ಲಿ ಮಧ್ಯಪ್ರದೇಶ ದೇಶದಲ್ಲೇ ನಂ.1 ಆಗಿದ್ದು ಉತ್ತರ ಪ್ರದೇಶ 2 ನೇ ಸ್ಥಾನದಲ್ಲಿದೆ, ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಕೇಳಿದೆ.  
ಮುಜಾಫರ್ ಪುರದ ಶೆಲ್ಟರ್ ಹೌಸ್ ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿರುವ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಎನ್ ಸಿಆರ್ ಬಿ ಅಂಕಿ-ಅಂಶಗಳನ್ನು ಉಲ್ಲೇಖಿಸಿದ್ದು,  ಶೆಲ್ಟರ್ ಹೌಸ್ ಗಳನ್ನು ನಿರ್ವಹಣೆ ಮಾಡುತ್ತಿದ್ದ ಎನ್ ಜಿಒಗೆ ಬಿಹಾರ ಸರ್ಕಾರ ಅನುದಾನ ನೀಡುತ್ತಿತ್ತು. ಆದರೆ ಅಲ್ಲೇನು ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿಯೇ ಇರಲಿಲ್ಲ ಹೇಗೆ? ನೀವು ಅಲ್ಲಿ ತನಿಖೆ ಮಾಡುವುದರ ಬಗ್ಗೆ ಯೋಚಿಸಲಿಲ್ಲವೇ ಎಂದು ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರವನ್ನು ಪ್ರಶ್ನಿಸಿದೆ. 
ಮುಜಫರ್ ಪುರದ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಕೇಳಿದೆ. 
SCROLL FOR NEXT