ಅಕ್ರಮ ವಸತಿ ನಿಲಯಗಳಿಗೆ ಬೀಗ 
ದೇಶ

ಡಿಯೋರಿಯಾ: ಅಕ್ರಮ ವಸತಿ ನಿಲಯಕ್ಕೆ ಬೀಗಮುದ್ರೆ :24 ಯುವತಿಯರ ರಕ್ಷಣೆ

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಅಕ್ರಮ ವಸತಿ ನಿಲಯಗಳ ಮೇಲೆ ರಾತ್ರಿ ಪೊಲೀಸರು ದಾಳಿ ನಡೆಸಿ ಬಾಗಿಲು ಜಡಿದಿದ್ದು, 24 ಯುವತಿಯರನ್ನು ರಕ್ಷಿಸಿದ್ದಾರೆ.

ಡಿಯೋರಿಯಾ: ಬಿಹಾರದ ಮುಜಾಫರ್ ಪುರ್  ವಸತಿ ನಿಲಯಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ  ಪ್ರಕರಣ ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವಂತೆ  ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಅಕ್ರಮ ವಸತಿ ನಿಲಯಗಳು ಇರುವುದು ಕಂಡುಬಂದಿದೆ.

ಅಕ್ರಮ ವಸತಿ ನಿಲಯಗಳ ಮೇಲೆ ರಾತ್ರಿ ಪೊಲೀಸರು ದಾಳಿ ನಡೆಸಿ ಬಾಗಿಲು ಜಡಿದಿದ್ದು, 24 ಯುವತಿಯರನ್ನು ರಕ್ಷಿಸಿದ್ದಾರೆ. ವಸತಿ ನಿಲಯದ ಮ್ಯಾನೇಜರ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಇಬ್ಬರು ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು  ನೇಮಿಸಿದ್ದಾರೆ.

ಅಕ್ರಮ ವಸತಿ ನಿಲಯಗಳ ಕಾರ್ಯಾಚರಣೆ  ಬಗ್ಗೆ  ಮಾಹಿತಿ ಪಡೆದ ನಂತರ  ಪರಿಶೀಲನೆ ನಡೆಸಲಾಗಿದೆ ಎಂದು ಎಂದು ನಗರ ಹೆಚ್ಚುವರಿ  ಮ್ಯಾಜಿಸ್ಟ್ರೇಟ್  ಪ್ರಫುಲ್  ತ್ರಿಪಾಠಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP March Violence: ಹೊಣೆಗಾರಿಕೆ ನಿಗದಿಯಾಗದ ತನಿಖೆ ನಿರರ್ಥಕ; ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ, ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಮುಂದು..!

ಪ್ರಧಾನಿ ಮೋದಿ ಫೇಸ್‌ಬುಕ್ ಪೋಸ್ಟ್‌ ಡಿಲೀಟ್: Metaಗೆ ಐಟಿ ಸಚಿವಾಲಯ ಸಮನ್ಸ್‌

"ಇದೆಂಥಾ ಅಸಂವೇದನಾಶೀಲತೆ"?: ಬೇಡಿಕೆ ಈಡೇರಿದ ಬೆನ್ನಲ್ಲೇ ಸಿಜೆಪಿ ನಾಯಕರಿಂದ ವಿಚಿತ್ರ ಸಂಭ್ರಮಾಚರಣೆ ಟೀಕೆಗೆ ಗುರಿ; ವಾಂಗ್ಚುಕ್ ಗೂ ಬೇಸರ!

CJP ಪ್ರತಿಭಟನೆ ವೇಳೆ ಬಳಸಿದ್ದು Plastic pellets: ಪೊಲೀಸ್ ದಾಖಲೆಯಿಂದ ಸ್ಫೋಟಕ ಮಾಹಿತಿ ಬಹಿರಂಗ..!

Parliament Monsoon Session: ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ಗದ್ದಲ, ಲೋಕಸಭೆ-ರಾಜ್ಯಸಭೆ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ..!