ನವದೆಹಲಿ: ಅಸ್ಸಾಂ ನ ಎನ್ ಆರ್ ಸಿಯ ಸಂಯೋಜಕ ಹಾಗೂ ರಿಸಿಸ್ಟಾರ್ ಜನರಲ್ ನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯಾಂಗ ನಿಂದನೆಯಡಿ ಜೈಲು ಶಿಕ್ಷೆ ವಿಧಿಸಬಹುದು ಎಂದು ಎಚ್ಚರಿಕೆ ನೀಡಿದೆ.
ಎನ್ ಆರ್ ಸಿ ಬಗ್ಗೆ ಹೇಳಿಕೆ ನೀಡುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಎನ್ ಆರ್ ಸಿ ಸಂಯೋಜಕರು ಹಾಗೂ ಅರ್ ಜಿಐ ನಡೆ ನ್ಯಾಯಾಂಗ ನಿಂದನೆಯಾಗಿದೆ ಎಂದು ಹೇಳಿದ್ದು, ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಸೂಚನೆ ನೀಡಿದೆ.
ನ್ಯಾ.ರಂಜನ್ ಗೋಗೋಯ್ ಹಾಗೂ ಆರ್ ಎಫ್ ನಾರಿಮನ್ ಅವರಿದ್ದ ವಿಭಾಗೀಯ ಪೀಠ, ಎನ್ ಆರ್ ಸಿ ಸಂಯೋಜಕ, ಪ್ರತೀಕ್ ಹಾಗೂ ಆರ್ ಜಿಐ ಶೈಲೇಶ್ ಅವರು ನೀಡುತ್ತಿರುವ ಹೇಳಿಕೆಗಳು ದುರದೃಷ್ಟಕರ, ನೀವು ಪತ್ರಿಕೆಗಳಿಗೆ, ಮಾಧ್ಯಮಗಳಿಗೆ ನೀಡಿರುವ ಸುದ್ದಿಗೆ ಹೇಗೆ ಸಂಬಂಧಪಟ್ಟಿದ್ದೀರಿ ಎಂಬುದನ್ನು ಹೇಳಿ ಎಂದು ನ್ಯಾಯಪೀಠ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಗೆ ಸಂಬಂಧಪಟ್ಟ ನಿರ್ದೇಶನಗಳನ್ನು ಪಾಲಿಸುವುದು ಮಾತ್ರ ನಿಮ್ಮ ಕರ್ತವ್ಯ. ಅನುಮತಿ ಇಲ್ಲದೇ ಮಾಧ್ಯಮಗಳಿಗೆ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.