ದೇಶ

ನಾಳೆ ರಾಜ್ಯಸಭೆ ಉಪಸಭಾಪತಿ ಚುನಾವಣೆ : ಅರುಣ್ ಜೇಟ್ಲಿ ಪಾಲ್ಗೊಳ್ಳುವ ಸಾಧ್ಯತೆ

Nagaraja AB

 ನವದೆಹಲಿ: ನಾಳೆ ರಾಜ್ಯಸಭೆಯ ಉಪಸಭಾಪತಿ ಚುನಾವಣೆ ನಡೆಯಲಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

 ರಾಜ್ಯಸಭೆಯ  ನಾಯಕರಾಗಿರುವ ಅರುಣ್ ಜೇಟ್ಲಿ ಮೇ ತಿಂಗಳಲ್ಲಿ  ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಅಂದಿನಿಂದ   ಸಂಸತ್ ಕಲಾಪದಲ್ಲಿ ಪಾಲ್ಗೊಂಡಿರಲಿಲ್ಲ. ನಾಳೆ  ಮೊದಲ ಬಾರಿಗೆ  ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಉಪಸಭಾಪತಿ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಪಾಲ್ಗೊಳ್ಳಲಿದ್ದು, ಮತ ಚಲಾಯಿಸಲಿದ್ದಾರೆ ಎಂಬಂತಹ ಮಾಹಿತಿಗಳು ತಿಳಿದುಬಂದಿದೆ.

65 ವರ್ಷದ ಅರುಣ್ ಜೇಟ್ಲಿ ಏಪ್ರಿಲ್  1 ರಿಂದಲೇ ಕಚೇರಿಗೆ ಬರುತ್ತಿರಲಿಲ್ಲ. ಮೇ 14 ರಂದು ಅವರಿಗೆ  ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಯಾಗಿತ್ತು.  ನಂತರ ರೈಲ್ವೆ ಸಚಿವ ಪಿಯೂಷ್ ಗೊಯಲ್ ಹಂಗಾಮಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅರುಣ್ ಜೇಟ್ಲಿ 2000ದಿಂದಲೂ ರಾಜ್ಯಸಭೆಯ ಸದಸ್ಯರಾಗಿದ್ದಾರೆ.  ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ  ಆಯ್ಕೆಯಾಗಿದ್ದರು.

SCROLL FOR NEXT