ದೇಶ

ಕರುಣಾನಿಧಿ ನಿಧನ: ಅಂತಿಮ ವಿದಾಯಕ್ಕೆ ಸಕಲ ಸಿದ್ಧತೆ, ತಮಿಳುನಾಡಿನಲ್ಲಿ ಮುಗಿಲು ಮುಟ್ಟಿದ ಆಕ್ರಂದನ

Manjula VN
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಮುತ್ತುವೇಲ್ ಕರುಣಾನಿಧಿ ಅವರ ಅಗಲಿಕೆಯಿಂದಾಗಿ ಇಡೀ ತಮಿಳುನಾಡು ಶೋಕಸಾಗರದಲ್ಲಿ ಮುಳುಗಿದ್ದು, ದ್ರಾವಿಡ ಮೇರು ನಾಯಕನಿಗೆ ಅಂತಿಮ ವಿದಾಯ ಹೇಳಲು ಮರೀನಾ ಬೀಚ್ ಬಳಿ ಸಕಲ ಸಿದ್ಧತೆಗಳು ನಡೆಯುತ್ತಿವೆ. 
ಪ್ರಸ್ತುತ ಕರುಣಾನಿಧಿಯವರ ಪಾರ್ಥೀವ ಶರೀರವನ್ನು ಚೆನ್ನೈನ ರಾಜಾಜಿ ಹಾಲ್ ನಲ್ಲಿ ಇರಿಸಲಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಸಾರ್ವಜನಿಕರ ದರ್ಶನದ ಬಳಿಕ ಸಂಜೆ 4 ಗಂಟೆ ಸುಮಾರಿಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಕರುಣಾನಿಧಿಯವರ ಅಂತ್ಯಕ್ರಿಯೆಗೆ ಸ್ಥಳ ನಿಗದಿಯಾಗುತ್ತಿದ್ದಂತೆಯೇ ಮರೀನಾ ಬೀಚ್ ನತ್ತ ಜನ ಸಾಗರವೇ ಹರಿದು ಬರುತ್ತಿದೆ. ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಮರೀನಾ ಬೀಚ್'ಗೆ ಜೆಸಿಬಿ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. 
ಈ ನಡುವೆ ಬ್ಯಾರಿಕೇಡ್ ಮುರಿದು ನುಗ್ಗಲು ಪ್ರಯತ್ನಿಸಿದ ಅಭಿಮಾನಿಗಳನ್ನು ತಡೆಯಲು ಪೊಲೀಸರು ರಾಜಾಜಿ ಹಾಲ್ ಬಳಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. 
11 ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರುಣಾನಿಧಿಯವರು ನಿನ್ನೆ ಸಂಜೆ 6.10ರ ಸುಮಾರಿಗೆ ಕೊನೆಯುಸಿರೆಳೆದಿದ್ದರು. ಕರುಣಾನಿಧಿಯವರ ಅಗಲಿಕೆ ಅಸಂಖ್ಯಾತ ಡಿಎಂಕೆ ಕಾರ್ಯಕರ್ತರನ್ನು ಶೋಕಸಾಗರದಲ್ಲಿ ದೂಡಿದೆ. 
SCROLL FOR NEXT