ದೇಶ

ಎಲ್ಲರ ಚಿತ್ತ ರಾಜ್ಯಸಭೆ ಉಪಾಧ್ಯಕ್ಷ ಚುನಾವಣೆಯತ್ತ: ಒಡಿಶಾ ಸಿಎಂ ಜೊತೆ ಪ್ರಧಾನಿ ಮೋದಿ ಮಾತುಕತೆ!

Shilpa D
ನವದೆಹಲಿ: ರಾಜ್ಯಸಭೆ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ, ಎನ್ ಡಿಎ ಅಭ್ಯರ್ಥಿಯಾಗಿ ಹರಿವಂಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ನಾನಪತ್ರ ಸಲ್ಲಿಸಿದ್ದಾರೆ. ಎರಡು ಬಣದವರು ತಮ್ಮ ಪರವಾಗಿ ಹೆಚ್ಚಿನ ಮತ ಬೀಳಲಿದೆ ಎಂಬ ಆತ್ಮ ವಿಶ್ವಾಸದಲ್ಲಿದ್ದಾರೆ.
ಮೊನ್ನೆಯವರೆಗೂ ಕಾಂಗ್ರೆಸ್ ನಿಂದ ವಂದನಾ ಚವಾಣ್ ಸ್ಪರ್ದಿಸಲಿದ್ದಾರೇ ಎಂಬ ಮಾತುಗಳು ಕೇಳಿಬಂದಿತ್ತು. ಆದರ ಅಂತಿಮವಾಗಿ ಕಾಂಗ್ರೆಸ್ ಹರಿಪ್ರಸಾದ್ ಅವರನವ್ನು ಕಣಕ್ಕಿಳಿಸಿದೆ,
ಬಿಜೆಡಿಯ 9 ಸಂಸದರು. ವೈಎಸ್ ಆಸ  ಕಾಂಗ್ರೆಸ್ ನಿಂದ ಇಬ್ಬರು, ಹಾಗೂ ಟಿಆರ್ ಎಸ್ ನ ಆರು ಸಂಸದರು ಎನ್ ಡಿ ಎ ಬೆಂಬಲಿಸುತ್ತಾರೆ ಎಂದು ಹೇಳಲಾಗಿದೆ,  ಕಾಂಗ್ರೆಸ್ ಕೂಡ ತನಗೆ ಅಗತ್ಯ ಸಂಖ್ಯೆಯ ಬಹುಮತ ಸಿಗುತ್ತದೆ ಎಂಬ ಭರವಸೆ ವ್ಯಕ್ತ ಪಡಿಸಿದೆ. ವಿರೋಧ ಪಕ್ಷ ಕಾಂಗ್ರೆಸ್ ಬಳಿ 115 ಸದಸ್ಯರ ಬಲ ಇದೆ, ಗೆಲ್ಲಲು ಸುಮಾರು 123 ಸಂಸದರ ಅವಶ್ಯಕತೆಯಿದೆ. 
ಇನ್ನು ಚುನಾವಣೆಗೆ ಕೆಲವೇ ಗಂಟೆಗಳು ಬಾಕಿಯಿರುವಾಗ ಪ್ರಧಾನಿ ಮೋದಿ ಒಡಿಶಾ ಸಿಎಂ ಬಿಜು ಪಟ್ನಾಯಕ್ ಜೊತೆ ಮಾತುಕತೆ ನಡೆಸಿದ್ದಾರೆ,  ಪಟ್ನಾಯಕ್ ಜೊತೆ ಮಾತನಾಡಿರುವ, ಪ್ರಧಾನಿ ಮೋದಿ, ಅಮಿತ್ ಶಾ, ಹಾಗೂ ರಾಜನಾಥ್ ಸಿಂಗ್ ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ. 
SCROLL FOR NEXT