ದೇಶ

ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಹಸ್ತಾಂತರ : ಇಂಗ್ಲೆಂಡ್, ಆಂಟಿಗುವಾ ರಾಷ್ಟ್ರಗಳ ಪ್ರತಿಕ್ರಿಯೆ ಕಾಯಲಾಗುತ್ತಿದೆ - ಎಂಇಎ

Nagaraja AB

ನವದೆಹಲಿ : ದೇಶಭ್ರಷ್ಟ ಆರ್ಥಿಕ ಅಪರಾಧಿಗಳಾದ ಮೆಹೂಲ್ ಚೋಕ್ಸಿ, ನೀರವ್  ಮೋದಿ, ಮತ್ತು ವಿಜಯಮಲ್ಯ ಅವರ ಹಸ್ತಾಂತರಕ್ಕೆ ಸಂಬಂಧಿಸಿದಂತೆ  ಇಂಗ್ಲೆಂಡ್ ಹಾಗೂ ಆಂಟಿಗುವಾ ರಾಷ್ಟ್ರಗಳ ಪ್ರತಿಕ್ರಿಯೆಯನ್ನು ಕಾಯಲಾಗುತ್ತಿದೆ ಎಂದು  ವಿದೇಶಾಂಗ ವ್ಯವಹಾರಗಳ ಸಚಿವಾಲಯ  ಹೇಳಿದೆ.

ಚೋಕ್ಸಿ ಹಸ್ತಾಂತರಿಸುವಂತೆ ಆಗಸ್ಟ್ 3 ರಂದೇ  ಆಂಟಿಗುವಾ ಮತ್ತು ಬರ್ಬುಡಾ ರಾಷ್ಟ್ರಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ. ಆ ರಾಷ್ಟ್ರಗಳಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್  ಕುಮಾರ್ ಸುದ್ದಿಗಾರರಿಗೆ ಇಂದು ತಿಳಿಸಿದರು.

ನಮ್ಮ ಮನವಿಯನ್ನು ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ. ಅದಕ್ಕಾಗಿ ನಾವು ಕಾಯುತ್ತಿದ್ದೇವೆ. ಏನಾದರೂ ಬೆಳವಣಿಗೆಯಾದರೆ ಅದನ್ನು ತಿಳಿಸುವುದಾಗಿ ಹೇಳಿದ ಕುಮಾರ್,  ಚೋಕ್ಸಿ ನೀರವ್ ಮೋದಿ ಸಂಬಂಧಿಯಾಗಿದ್ದು, ನೀರವ್ ಮೋದಿಯನ್ನು  ಭಾರತಕ್ಕೆ ಹಸ್ತಾಂತರಿಸುವಂತೆ  ಆಗಸ್ಟ್ 3 ರಂದು ಜಾರಿ ನಿರ್ದೇಶನಾಲಯ ಇಂಗ್ಲೆಂಡ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದು ಹೇಳಿದರು.

ಮದ್ಯ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರವೀಶ್ ಕುಮಾರ್,  ಈ ವಿಚಾರ ಪ್ರಸ್ತುತ ವೆಸ್ಟಮಿನಿಸ್ಟರ್  ಮ್ಯಾಜಿಸ್ಟ್ರೇಟ್  ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು,  ಸೆಪ್ಟೆಂಬರ್ 12 ರಂದು ಮುಂದಿನ ವಿಚಾರಣೆ ನಡೆಯಲಿದೆ . ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿರುವುದಾಗಿ ರವೀಶ್ ಕುಮಾರ್ ಹೇಳಿದರು.

SCROLL FOR NEXT