ದೇಶ

ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಬಗ್ಗೆ ಕಿರು ಮಾಹಿತಿ

Sumana Upadhyaya

ರಾಜ್ಯಸಭೆಯ ಉಪ ಸಭಾಪತಿಯಾಗಿ ಗುರುವಾರ ಆಯ್ಕೆಯಾಗಿರುವ ಎನ್ ಡಿಎ ಅಭ್ಯರ್ಥಿ ಮತ್ತು ಜೆಡಿಯು ಸಂಸದ ಹರಿವಂಶ ನಾರಾಯಣ್ ಸಿಂಗ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ ಕೆ ಹರಿಪ್ರಸಾದ್ ಅವರನ್ನು 20 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹರಿವಂಶ ನಾರಾಯಣ್ ಸಿಂಗ್ 125 ಮತಗಳನ್ನು ಗಳಿಸಿದರೆ ಬಿ ಕೆ ಹರಿಪ್ರಸಾದ್ ಅವರಿಗೆ 105 ಮತಗಳು ಲಭಿಸಿವೆ.

ಹಾಗಾದರೆ ಹರಿವಂಶ ಸಿಂಗ್ ಯಾರು, ಅವರ ಹಿನ್ನಲೆಯೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
-ಬಿಹಾರದ ಸರನ್ ಜಿಲ್ಲೆಯ ಸಿತಾಬ್ ದಿಯಾರಾ ಗ್ರಾಮದಿಂದ ಬಂದವರು ಹರಿವಂಶ ನಾರಾಯಣ್ ಸಿಂಗ್. ಇವರು ಜನಿಸಿದ್ದು ಜೂನ್ 30, 1956.

-ಕಾಲೇಜು ದಿನಗಳಿಂದ ಬಹಳ ವರ್ಷಗಳವರೆಗೆ ಸಮಾಜ ಸುಧಾರಕರಾಗಿ ಮತ್ತು ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ಗುರುತಿಸಿಕೊಂಡಿದ್ದರು. 1974ರಲ್ಲಿ ಜೆಪಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

-ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. 1980ರ ದಶಕದಲ್ಲಿ ಧರ್ಮಯುಗ್ ಎಂಬ ಹಿಂದಿ ವಾರಪತ್ರಿಕೆಯಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದರು.

-ನಂತರ 1989ರಲ್ಲಿ ರಾಂಚಿಯಲ್ಲಿ ಹಿಂದಿ ದಿನಪತ್ರಿಕೆ ಪ್ರಭಾತ್ ಕಬರ್ ಎಂಬ ಪತ್ರಿಕೆಗೆ ಸೇರಿ ಅದರಲ್ಲಿ ಬಡ್ತಿ ಪಡೆದು ಮುಖ್ಯ ಸಂಪಾದಕರಾದರು.

2014ರಲ್ಲಿ ರಾಜ್ಯಸಭೆಯಲ್ಲಿ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳ ಮೂಲಕ ರಾಜ್ಯಸಭಾ ಸದಸ್ಯರಾದರು. ಅದರ ಅಧಿಕಾರಾವಧಿ 2020ಕ್ಕೆ ಮುಗಿಯಲಿದೆ.

ರಾಜ್ಯಸಭೆಗೆ ಆಯ್ಕೆಯಾಗುವ ಮುನ್ನ 1990ರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದರು.

SCROLL FOR NEXT