ರೈಲುಗಳೇಕೆ ಸರಿಯಾದ ಸಮಯಕ್ಕೆ ಬರುವುದಿಲ್ಲ?: ಸಿಎಜಿ ಬಳಿ ಇದೆ ಉತ್ತರ! 
ದೇಶ

ರೈಲುಗಳೇಕೆ ಸರಿಯಾದ ಸಮಯಕ್ಕೆ ಬರುವುದಿಲ್ಲ?: ಸಿಎಜಿ ಬಳಿ ಇದೆ ಉತ್ತರ!

ಸಮಯಕ್ಕೆ ಸರಿಯಾಗಿ ರೈಲುಗಳ ಸಂಚಾರದ ಬಗ್ಗೆ ಗಮನ ಹರಿಸುವ ಬದಲು, ಪ್ರಯಾಣಿಕರ ಸೌಲಭ್ಯಗಳ ಸುಧಾರಣೆ, ರೈಲು ನಿಲ್ದಾಣದ ಹೊರನೋಟವನ್ನು ಚೆಂದಗೊಳುಸುವತ್ತ ಹೆಚ್ಚು ಗಮನ ಕೇಂದ್ರೀಕರಿಸುತ್ತಿರುವ

ನವದೆಹಲಿ: ಸಮಯಕ್ಕೆ ಸರಿಯಾಗಿ ರೈಲುಗಳ ಸಂಚಾರದ ಬಗ್ಗೆ ಗಮನ ಹರಿಸುವ ಬದಲು, ಪ್ರಯಾಣಿಕರ ಸೌಲಭ್ಯಗಳ ಸುಧಾರಣೆ, ರೈಲು ನಿಲ್ದಾಣದ ಹೊರನೋಟವನ್ನು ಚೆಂದಗೊಳುಸುವತ್ತ ಹೆಚ್ಚು ಗಮನ ಕೇಂದ್ರೀಕರಿಸುತ್ತಿರುವ ಬಗ್ಗೆ ಸಿಎಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 
ಈ ವಾರ ಸಂಸತ್ ನಲ್ಲಿ ಮಂಡನೆಯಾದ ಸಿಎಜಿ ವರದಿಯಲ್ಲಿ ರೈಲ್ವೆ ಇಲಾಖೆ ರೈಲುಗಳ ಸಮಯ ಪಾಲನೆ ಬಗ್ಗೆಯೂ ಉಲ್ಲೇಖಿಸಿರುವ ಸಿಎಜಿ, ನಿಲ್ದಾಣ ಅಭಿವೃದ್ಧಿ ಯೋಜನೆಗಳಲ್ಲಿ ಪ್ರಯಾಣಿಕರ ಸೌಲಭ್ಯಗಳ ಸುಧಾರಣೆ, ರೈಲು ನಿಲ್ದಾಣದ ಹೊರನೋಟದ ಬಗ್ಗೆಯೇ ಹೆಚ್ಚು ಗಮನಹರಿಸಲಾಗಿದೆಯೇ ಹೊರತು ರೈಲುಗಳ ಸಮಯ ಪಾಲನೆಯನ್ನು ಸುಧಾರಿಸುವ ಬಗ್ಗೆ ಹೆಚ್ಚು ಗಮನಹರಿಸಲಾಗಿಲ್ಲ ಎಂದು ಹೇಳಿದೆ. 
15 ನಿಲ್ದಾಣಗಳಲ್ಲಿ ಪ್ರತಿ ದಿನ ನಿರ್ವಹಿಸಲ್ಪಡುವ ರೈಲುಗಳ ಸಂಖ್ಯೆ ಗಣನೀಯವಾಗಿ ಎರಿಕೆಯಾಗಿದೆ. ಆದರೆ ಪ್ಲ್ಯಾಟ್ಫಾರ್ಮ್ ಗಳು, ರೈಲು ನಿಲ್ದಾಣಗಳಲ್ಲಿನ ಲೈನ್ ಗಳ ಸ್ಥಿರತೆಯನ್ನೂ ಸಹ ಅದಕ್ಕೆ ತಕ್ಕಂತೆ ಸುಧಾರಣೆ ಮಾಡಲಾಗಿಲ್ಲ ಎಂದು ಸಿಎಜಿ ಹೇಳಿದೆ. 
ಮಾರ್ಚ್ 2017 ರ ವರೆಗೂ ಇರುವ ಮಾಹಿತಿಯ ಪ್ರಕಾರ 15 ನಿಲ್ದಾಣಗಳಲ್ಲಿ 2,436 ರೈಲುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ, ಈ ಪಕಿ 638 ರೈಲುಗಳು 24 ಅಥವಾ ಅದಕ್ಕಿಂತ ಹೆಚ್ಚು ಕೋಚ್ ಗಳನ್ನು ಹೊಂದಿದ್ದು, ಪ್ರತಿ ನಿತ್ಯ ಸಂಚರಿಸುತ್ತವೆ. ಈ ರೈಲುಗಳ ನಿಲುಗಡೆಗೆ ಪೂರಕವಾಗಿ ಸಾಕಷ್ಟು ಉದ್ದವಿರುವ  ಪ್ಲ್ಯಾಟ್ಫಾರ್ಮ್ ಅಗತ್ಯವಿದ್ದು,  ಲೈನ್ ಗಳ ಸ್ಥಿರತೆಯನ್ನೂ ಕಾಯ್ದುಕೊಳ್ಳಬೇಕಿದೆ ಎಂದು ಸಿಎಜಿ ವರದಿ ಹೇಳಿದೆ.
ಸಾಕಷ್ಟು ಪ್ಲಾಟ್ಫಾರ್ಮ್ ಗಳ ಕೊರತೆ ಇರುವುದು ಸಹ ರೈಲುಗಳು ಸರಿಯಾದ ಸಮಯಕ್ಕೆ ಬಾರದೇ ಇರುವುದಕ್ಕೆ ಇರುವ ಪ್ರಮುಖ ಕಾರಣ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ. ರೈಲುಗಳ ಸಮಯ ಪಾಲನೆಗೆ ಸಿಎಜಿ ರೈಲ್ವೆಯ ಎಲ್ಲಾ ವಿಭಾಗಗಳಿಗೂ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದು, ಸಮಗ್ರ ಯೋಜನೆಯನ್ನು ರೂಪಿಸಬೇಕೆಂದು ಹೇಳಿದೆ. ಮುಂದಿನ ಹಂತದ ಯೋಜನೆಯನ್ನು ರೂಪಿಸುವಾಗ ಹೆಚ್ಚು ಪ್ಲಾಟ್ ಫಾರ್ಮ್ ಗಳನ್ನು ಸೇರಿಸುವುದರ ಬಗ್ಗೆಯೂ ರೈಲ್ವೆ ಹೆಚ್ಚಿನ ಗಮನ ನೀಡಬೇಕಿದೆ ಎನ್ನುತ್ತಿದೆ ಸಿಎಜಿ ವರದಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ