ದೇಶ

ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಧಾನಿ ಮೋದಿ ಮೌನ - ರಾಹುಲ್ ಪ್ರಶ್ನೆ

Nagaraja AB

ರಾಯ್ ಪುರ : ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿನ ಅತ್ಯಾಚಾರ ಆರೋಪದ   ಬಗ್ಗೆ ಪ್ರಧಾನಿ ನರೇಂದ್ರಮೋದಿ ಏಕೆ ಏನನ್ನು ಮಾತನಾಡದೆ ಮೌನವಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹೊಸ ಕಚೇರಿ ಉದ್ಘಾಟಿಸಿದ ನಂತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ  ಅವರು,  ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿನ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ವಿಷಯಕ್ಕೆ ಸಂಬಂಧಿಸಿದಂತೆ ನರೇಂದ್ರಮೋದಿ  ಒಂದು ಪದವನ್ನು ಆಡುತ್ತಿಲ್ಲ, ಈ ವಿಷಯಗಳ ಬಗ್ಗೆ ಪ್ರಧಾನಿ ಮೌನದ ಬಗ್ಗೆ  ದೇಶದ ಮಹಿಳೆಯರೂ ಕೂಡಾ ಆಶ್ಚರ್ಯಪಡುತ್ತಿದ್ದಾರೆ ಎಂದರು.

ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ರಾಪೆಲ್ ವಿಮಾನ ಖರೀದಿ ಒಪ್ಪಂದ ದೇಶದಲ್ಲಿ ದೊಡ್ಡ ಹಗರಣವಾಗಿದ್ದು, ನರೇಂದ್ರಮೋದಿ ಕೂಡಾ ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಈ ವಿಷಯವನ್ನು ಜನರಿಗೆ ಗೊತ್ತಾಗದಂತೆ ಏಕೆ ಬಚ್ಚಿಡಲಾಗುತ್ತಿದೆ ಎಂದು ಸಂಸತ್ತಿನಲ್ಲಿ ರಕ್ಷಣಾ ಸಚಿವರನ್ನು ಕೇಳಿದೆ. ಆದರೆ. ನನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ. ಪ್ರಧಾನಿ ಕೇಳಿದ್ದಾಗ ಅವರು ಕೂಡಾ ನನ್ನ ಕಣ್ಣುಗಳನ್ನು ನೋಡಲಿಲ್ಲ, ಅವರು ಅಲ್ಲಿ ಇಲ್ಲಿ  ನೋಡುತ್ತಿದ್ದರು. ಯಾಕೆಂದರೆ ಕಾವಲುದಾರ ಕೂಡಾ ಅದರಲ್ಲಿ ಭಾಗಿಯಾಗಿದ್ದಾರೆ ಎಂದರು.

SCROLL FOR NEXT