ದೇಶ

ಸ್ವಾತಂತ್ರ್ಯವಿಲ್ಲದ ಜೀವನಕ್ಕೆ ಅರ್ಥವೇ ಇಲ್ಲ: ಸಿಜೆಐ ದೀಪಕ್ ಮಿಶ್ರಾ

Lingaraj Badiger
ಪುಟ್ಟಪರ್ತಿ: ಜೀವನದಲ್ಲಿ ಸ್ವಾತಂತ್ರ್ಯ ಮತ್ತು ಆಧ್ಯಾತ್ಮಿಕತೆಯ ಮಹತ್ವವನ್ನು ಬಲವಾಗಿ ಸಮರ್ಥಿಸಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಸ್ವಾತಂತ್ರ್ಯವಿಲ್ಲದೆ ಜೀವನಕ್ಕೆ ಅರ್ಥವೇ ಇಲ್ಲ ಎಂದು ಹೇಳಿದ್ದಾರೆ.
ಪ್ರಶಾಂತಿ ನಿಲಯಂ ಪುಟ್ಟಪರ್ತಿಯಲ್ಲಿ ಆಯೋಜಿಸಿದ್ದ 'ಮಾನವ ಮೌಲ್ಯಗಳು ಮತ್ತು ಕಾನೂನು ಜಗತ್ತು' ಕುರಿತ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ದೀಪಕ್ ಮಿಶ್ರಾ ಅವರು, ಸ್ವಾತಂತ್ರ್ಯವಿಲ್ಲದಯೇ ಮಾನವ ಜನಾಂಗ ಬದುಕಬಲ್ಲದೆ? ಎಂದು ಪ್ರಶ್ನಿಸಿದರು. 
ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ವಿವರಿಸಿದ ಸಿಜೆಐ, ಆಧ್ಯಾತ್ಮವು ತರ್ಕಬದ್ಧವನ್ನು ಮೀರಿದ್ದಾಗಿದೆ. ನನ್ನ ಆಧ್ಯಾತ್ಮಿಕತೆ ಮತ್ತು ನೈತಿಕ ಸಮಾಲೋಚನೆ ನನಗೆ ಇಲ್ಲಿ ಬರುವಂತೆ ಮಾಡಿತು. ವಿಜ್ಞಾನ ಮತ್ತು ಆಧ್ಯಾತ್ಮದ ನಡುವೆ ಘರ್ಷಣೆಯ ಅಗತ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.
ಮಾವವೀಯ ಮೌಲ್ಯಗಳ ಅಡಿಪಾಯದ ಮೇಲೆ ಕಾನೂನುಗಳನ್ನು ರಚಿಸಲಾಗಿದೆ. ಮಾನವೀಯ ಮೌಲ್ಯಗಳು ಕುಸಿದರೆ ಇಡೀ ವ್ಯವಸ್ಥೆಯೇ ಕುಸಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.
SCROLL FOR NEXT