72ನೇ ಸ್ವಾತಂತ್ರ್ಯ ದಿನಾಚರಣೆ: ಅಮೃತಸರದಲ್ಲಿ ಹೆಚ್ಚಿದ ಭದ್ರತೆ
ಅಮೃತಸರ: 72ನೇ ಸ್ವಾತಂತ್ರ್ಯ ದಿನಾಚರಣೆಗೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಪಂಜಾಬ್ ರಾಜ್ಯದ ಅಮೃತಸರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಲಂಡನ್ ನಲ್ಲಿ ರೆಫರೆಂಡಮ್ (ಜನಾಭಿಪ್ರಾಯ) 2020 ಕಾರ್ಯಕ್ರಮ ಲಂಡನ್'ನ ಟ್ರಫಲ್ಗರ್ ಸ್ಕ್ವೇರ್ ನಡೆಯಲ್ಲಿ ಇಂದು ನಡೆಯುತ್ತಿದ್ದು, ಈ ಕಾರ್ಯಕ್ರಮವನ್ನು ಅಮೆರಿಕಾ ಮೂಲದ ಸಿಕ್ಖ್ ಸಂಘಟನೆಗಳು ಸಿಕ್ಖರಿಗೆ ಸ್ವಾತಂತ್ರ್ಯ ಆಗ್ರಹಿಸಿ ನಡೆಸುತ್ತಿದ್ದಾರೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ಅಮೃತಸರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿಲ್ಲ. ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಎಂದಿನಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಗಡಿಯಲ್ಲಿ ಹಾಗೂ ಚೆಕ್ ಪೋಸ್ಟ್ ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಮೃತಸರದ ಮೇಲೆ ದಾಳಿ ನಡೆಸುವ ಕುರಿತಂತೆ ಯಾವುದೇ ರೀತಿಯ ಮಾಹಿತಿಗಳು ಬಂದಿಲ್ಲ. ಆದರೆ, ಕಾನೂನು ವಿರುದ್ಧ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲು ಬಿಡುವುದಿಲ್ಲ. ಹೀಗಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಮೃತಸರದ ಪೊಲೀಸ್ ಆಯುಕ್ತ ಎಸ್ಎಸ್ ಶ್ರೀವಾತ್ಸವ ಅವರು ಹೇಳಿದ್ದಾರೆ.