ನವದೆಹಲಿ: ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿಯವರು ಭಾರತೀಯ ರಾಜಕೀಯದ ಅಗ್ರಗಣ್ಯರಾಗಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಚಟರ್ಜಿಯವರು ಭಾರತೀಯ ರಾಜಕೀಯದ ಅಗ್ರಗಣ್ಯರಾಗಿದ್ದರು. ನಮ್ಮ ಸಂಸತ್ತಿನ ಪ್ರಜಾಪ್ರಭುತ್ವ ಶ್ರೀಮಂತವಾಗಿರುವಂತೆ ಮಾಡಿದ್ದರು. ಬಡ ಜನರ ಬಲವಾದ ದನಿಯಾಗಿದ್ದರು ಎಂದು ಹೇಳಿದ್ದಾರೆ.
ಚಟರ್ಜಿಯವರ ಅಗಲಿಕೆ ಬಹಳ ನೋವನ್ನು ತಂದಿದೆ. ಅವರ ಕುಟುಂಬಸ್ಥರು ಹಾಗೂ ಬೆಂಬಲಿಗರಿಗೆ ಸಂತಾಪವನ್ನು ಸೂಚಿಸುತ್ತೇನೆಂದು ತಿಳಿಸಿದ್ದಾರೆ.