ನವದೆಹಲಿ: ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ಹಾಗೂ ಮಾನವೀಯತೆ ಆಧಾರದ ಪಾಕಿಸ್ತಾನದ ಏಳು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲ ಸೋಮವಾರ ಖಚಿತಪಡಿಸಿದೆ.
ಇದಕ್ಕು ಮುನ್ನ ಪಾಕಿಸ್ತಾನ ಸಹ ತನ್ನ ಸ್ವಾತಂತ್ರ್ಯ ದಿನಾಚರಣೆ ಮತ್ತು ಮಾನವೀಯತೆ ಆಧಾರದ ಮೇಲೆ 29 ಭಾರತೀಯ ಕೈದಿಗಳನ್ನ ಬಿಡುಗಡೆ ಮಾಡಿತ್ತು.
ಮಾನವೀಯತೆ ವಿಚಾರದಲ್ಲಿ ಪಾಕಿಸ್ತಾನ ರಾಜಕೀಯ ಮಾಡುವುದಿಲ್ಲ. ಭಾರತ ಸಹ ಇದೇ ರೀತಿ ಪರಸ್ಪರ ವಿನಿಮಯ ಮಾಡಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತ್ತು.
36 ವರ್ಷಗಳ ಹಿಂದೆ ಪಾಕಿಸ್ತಾನದ ಗಡಿಯೊಳಗೆ ಕಾಲಿಟ್ಟಿದ್ದ ಜೈಪುರದ ಗಜಾನಂದ್ ಶರ್ಮ ಸೇರಿದಂತೆ 29 ಭಾರತೀಯ ಕೈದಿಗಳು ಇಂದು ಬಿಡುಗಡೆಯಾಗುತ್ತಿದ್ದಾರೆ.
ಬರೋಬ್ಬರಿ 36 ವರ್ಷಗಳ ನಂತರ ಸ್ವದೇಶಕ್ಕೆ ಮರಳುತ್ತಿರುವ ಶರ್ಮಾ ನಾಳೆ ಜೈಪುರ ತಲುಪಲಿದ್ದು, ಅವರನ್ನು ಬರಮಾಡಿಕೊಳ್ಳಲು ಊರಿನ ಜನರು ಸಂಭ್ರಮ, ಕಾತುರದಿಂದ ಕಾಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics