ನವದೆಹಲಿ: 2011-12ನೇ ಸಾಲಿನಲ್ಲಿ ತನ್ನ ತೆರಿಗೆ ಆದಾಯ ಮೌಲ್ಯಮಾಪನವನ್ನು ಮಾಡುವಾಗ ತೆರಿಗೆ ಇಲಾಖೆಯು ತಪ್ಪಾಗಿ ಲೆಕ್ಕ ಹಾಕಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಎ.ಕೆ ಚಾವ್ಲಾ ಅವರನ್ನೊಳಗೊಂಡ ಪೀಠದ ಮುಂದೆ ಸೋನಿಯಾ ಪರವಾಗಿ ಹಿರಿಯ ವಕೀಲ ಪಿ. ಚಿದಂಬರಂ ವಿವರಿಸಿದ್ದಾರೆ. ತೆರಿಗೆ ಇಲಾಖೆ ತಪ್ಪಾದ ಸೂತ್ರವನ್ನು ಅಳವಡಿಸಿದ್ದರು. ಸೊನಿಯಾ ಗಾಂಧಿ ಕಂಪನಿಯಲ್ಲಿ 1,900 ಷೇರುಗಳನ್ನು ಹೊರತುಪಡಿಸಿ ಏನೂ ಪಡೆದಿಲ್ಲ" ಎಂದು ವಕೀಲರು ಹೇಳಿದರು.
ನ್ಯಾಷನಲ್ ಹೆರಾಲ್ಡ್ ವೃತ್ತಪತ್ರಿಕಾ ಸಮೂಹದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಯಿಂದ ಯಂಗ್ ಇಂಡಿಯನ್ ಖರೀದಿಗಾಗಿ 90 ಕೋಟಿ ರೂ ಸಾಲವನ್ನು ಪಡೆದು ಅದನ್ನು ಇಕ್ವಿಟಿಯಾಗಿ ಮಾರ್ಪಡಿಸಲಾಯಿತು ಮತ್ತು ಇದು ತೆರಿಗೆ ಆದಾಯಕ್ಕೆ ಅನ್ವಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಇಕ್ವಿಟಿಯು ತೆರಿಗೆ ವ್ಯಾಪ್ತಿಗೆ ಬಂದರೂ ಸಹ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಮತ್ತು ಪಕ್ಷದ ನಾಯಕ ಆಸ್ಕರ್ ಫೆರ್ನಾಂಡಿಸ್ ಮುಂತಾದ ಯಂಗ್ ಇಂಡಿಯನ್ ಷೇರುದಾರರ ಕೈಗೆ ಇದು ತಲುಪುವುದಿಲ್ಲ ಬ್ಯಾಂಕುಗಳು ಆಗಾಗ್ಗೆ ಸಾಲವನ್ನು ಇಕ್ವಿಟಿಯಾಗಿ ಬದಲಿಸುತ್ತದೆ.ಆದರೆ ಇದರಿಂದ ಬ್ಯಾಂಕ್ ಅಥವಾ ಅದರ ಷೇರುದಾರರ ಕಗೆ ಆದಾಯ ದೊರಕುವುದಿಲ್ಲ.ಎಂದು ಅವರು ಹೇಳಿದರು.
ವೆಂಬರ್ 2010 ರಲ್ಲಿ ರೂ. 50 ಲಕ್ಷ ಬಂಡವಾಳವನ್ನು ಹೊಂದಿದ್ದ ಯಂಗ್ ಇಂಡಿಯಾ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವದ ಎಜೆಎಲ್ ನ ಬಹುತೇಕ ಎಲ್ಲಾ ಶೇರುಗಳನ್ನು ಸ್ವಾಧೀನಪಡಿಸಿಕೊಂಡಿತು. ಈ ಪ್ರಕ್ರಿಯೆಯಲ್ಲಿ, ಎಐಎಲ್ ನ 90 ಕೋಟಿ ರೂ. ಸಹ ಸೇರಿದೆ.
ವಾದವನ್ನಾಲಿಸಿದ ನ್ಯಾಯಾಲಯ ಹೆಚ್ಚುವರಿ ಸಾಲಿಸಿಟರ್ ಜನರ ಅವರಿಗೆ ಈ ಸಂಬಂಧ ಔಪಚಾರಿಕ ನೋಟೀಸು ಜಾರಿಗೊಳಿಸುವುದಾಗಿ ಹೇಳಿದಾಗ ಅಲ್ಲೇ ಉಪಸ್ಥಿತರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ತುಶಾರ್ ಮೆಹ್ತಾ ತಾನು ನ್ಯಾಯಾಲಯದಲ್ಲಿ ಉಪಸ್ಥಿತರಿರುವಾಗ ಇದರ ಅಗತ್ಯವಿಲ್ಲ ಎಂದರು.
ತೆರಿಗೆ ಇಲಾಖೆಯು ತೆಗೆದುಕೊಂಡ ಕ್ರಮವನ್ನು ಸಾಲಿಸಿಟರ್ ಜನರಲ್ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿ ಆದೇಶಿಸಿದೆ. ಇದೇ ವೇಳೆ ನ್ಯಾಯಾಲಯವು ತಾನು ತೀರ್ಪು ಘೋಷಿಸುವವರೆಗೆ ಯಾವುದೇ ದಬ್ಬಾಳಿಕೆಯ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ತೆರಿಗೆ ಇಲಾಖೆಗೆ ಸೂಚಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos