ದೇಶ

ಪ್ರಧಾನಿ ಮೋದಿ ಸ್ವಾತಂತ್ರ ದಿನದ ಭಾಷಣ ಗೂಗಲ್, ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮಿಂಗ್!

Raghavendra Adiga
ನವದೆಹಲಿ: ನಾಳೆ ದೇಶವು 72ನೇ ಸ್ವಾತಂತ್ರ ದಿನವನ್ನು ಸಂಭ್ರಮದಿಂದ ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ದೇಶವನ್ನುದ್ದೇಶಿಸಿ ಮಾಡುವ ಭಾಷಣವನ್ನು ಗೂಗಲ್ ಹೋಮ್ ಪೇಜ್ ನಲ್ಲಿ  ಲೈವ್ ಮಾಡಲಾಗುತ್ತಿದೆ. ಈ ಸಂಬಂಧ  ಪ್ರಸಾರ ಭಾರತಿ ಅಮೆರಿಕಾ ಟೆಕ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ನಾಳಿನ ಸ್ವಾತಂತ್ರ ದಿನದ ಕಾರ್ಯಕ್ರಮವು ದೂರದರ್ಶನದಲ್ಲಿ ನೇರಪ್ರಸಾರವಾಗಲಿದೆ.ಖ್ಯಾತ ಗಾಯಕ ಶಂಕರ್ ಮಹದೇವನ್ ಅವರ ಗಾಯನದೊಂದಿಗೆ ದೆಹಲಿಯ ಕೆಂಪು ಕೋಟೆಯಲ್ಲಿ ಜರುಗುವ ಕಾರ್ಯಕ್ರಮದ ನೇರಪ್ರಸಾರ ಪ್ರಾರಂಭವಾಗಲಿದೆ.
"ಇಷ್ಟು ವರ್ಷ ಸ್ವಾತಂತ್ರ ದಿನದ ಕಾರ್ಯಕ್ರಮ ಟಿವಿಯಲ್ಲಿ ನೇರಪ್ರಸಾರವಾಗುತ್ತಿತ್ತು. ಇದೀಗ ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮಿಂಗ್ ಆಗುತ್ತಿದೆ ಮತ್ತು ಗೂಗಲ್ ಸರ್ಚ್ ಇಂಜಿನ್ ನ ಹೋಮ್ ಪೇಜ್ ನಲ್ಲಿ ಸಹ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಿದ್ದೇವೆ." ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ವೆಂಪತಿ ಪಿಟಿಐಗೆ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನದ ಬಗೆಗೆ ಯಾರೇ ಹುಡುಕಿದರೆ (ಗೂಗಲ್ ಸರ್ಚ್ ಮಾಡಿದರೆ) ಅವರು ಮೋದಿಯವರ ಭಾಷಣದ ಲೈವ್ ನೋಡಲು ಸಾಧ್ಯವಿದೆ.ಈ ಲೈವ್ ಸ್ಟ್ರೀಮಿಂಗ್ ಲಿಂಕ್ ಪುಟದ ಮೇಲ್ಭಾಗದಲ್ಲೇ ಕಾಣಿಸಿಕೊಳ್ಳುವ ಕಾರಣ ವಿಸಿಬಿಲಿಟಿ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಇದೇ ಸೌಲಭ್ಯವನ್ನು ಈ ಹಿಂದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಭಾಷಣ ನಡೆಸುವ ವೇಳೆ ಬಳಸಿಕೊಳ್ಳಲಾಗಿತ್ತು.
ಲೈವ್ ಸ್ಟ್ರೀಮಿಂಗ್ ಇದೀಗ ಕೆಲವು ವರ್ಷಗಳಿಂದಲೂ ಜನಪ್ರಿಯವಾಗಿದೆ,.ಕಳೆದ ವರ್ಷ ಇದು ಒಂದು ದಶಲಕ್ಷಕ್ಕಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಕಂಡಿತ್ತು. ಗಣರಾಜ್ಯ ದಿನದಂದು ನಡೆದ ಕಾರ್ಯಕ್ರಮವನ್ನು 3-4 ದಶಲಕ್ಷ ಜನ ವೀಕ್ಷಿಸಿದ್ದಾರೆ.ಇದು ಸಾಮಾನ್ಯ ಪ್ರವೃತ್ತಿಯಾಗಿದೆ,ಮತ್ತು ಇದು ನಮ್ಮನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಶಶಿ ಶೇಖರ್ ನುಡಿದರು.
ಪ್ರಧಾನಿ ಭಾಷಣವನ್ನು ಸುಮಾರು 20 ವಿವಿಧ ಭಾಷೆಗಳಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರ ಮಾಡಲಾಗುವುದು ಎಂದು ಅವರು ಹೇಳಿದರು.ಆಲ್ ಇಂಡಿಯಾ ರೇಡಿಯೋ ನ್ಯೂಸ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಷನ್ ನ ಹೊಸ ಆವೃತ್ತಿ ಕೂಡಾ ಬಿಡುಗಡೆಯಾಗಿದ್ದು, 20ಕ್ಕೂ ಹೆಚ್ಚು ಭಾಷೆಗಳಲ್ಲಿ  ಎಲ್ಲಾ ಅಖಿಲ ಭಾರತ ರೇಡಿಯೋ ಸ್ಟೇಷನ್ ಗಳ ಲೈವ್ ಸ್ಟ್ರೀಮ್ನಲ್ಲಿ  ಸುದ್ದಿ ಪ್ರಸಾರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
SCROLL FOR NEXT