ವಿಶ್ವಪರ್ಯಟನೆ ಮಾಡಿದ ತಾರಿಣಿ ತಂಡಕ್ಕೆ ಶೌರ್ಯ ಪ್ರಶಸ್ತಿ
ನವದೆಹಲಿ: ತಾರಿಣಿ ವಿಶೇಷ ನೌಕೆಯ ಮೂಲಕ ವಿಶ್ವ ಪರ್ಯಟನೆ ಮಾಡಿ ಬಂದಿರುವ ಭಾರತೀಯ ನೌಕಾಪಡೆಯ ಆರು ವನಿತೆಯರ ತಂಡಕ್ಕೆ ನಾವೋ ಸೇನಾ (ಗ್ಯಾಲಾಂಟರಿ) ಪದಕವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಘೋಷಿಸಿದ್ದಾರೆ.
ಲೆ.ಕಮಾಂಡರ್ ವಾರ್ತಿಕಾ ಜೋಶಿ ನೇತೃತ್ವದ ತಂಡ 254 ದಿನಗಳ ಕಾಲ ಸಮುದ್ರಮಾರ್ಗದ ಮೂಲಕ ತಾರಿಣಿ ನೌಕೆಯಲ್ಲಿ 21,600 ನಾಟಿಕಲ್ ಮೈಲಿ ದೂರವನ್ನು ಕ್ರಮಿಸಿ ವಿಶ್ವಯಾನ ಮಾಡಿ ಸಾಹಸ ಮೆರೆದಿತ್ತು.
ಪ್ರಶಸ್ತಿ ಖಾತರಿಯಾಗಿದ್ದರ ಕುರಿತು ಪ್ರತಿಕ್ರಯಿಸಿದ ನೌಕಾಪಡೆ ಅಧಿಕಾರಿಗಳು ನೌಕಾಪಡೆಯ ಲೆಫ್ಟಿನೆಂಟ್ ಸಿ.ಡಿ.ಆರ್. ವಾರ್ತಿಕಾ ಜೋಶಿ (43077-ಎ) ಪ್ರದರ್ಶಿಸಿದ ಧೈರ್ಯ ಹಿಷ್ಣುತೆ ಮತ್ತು ವೃತ್ತಿಪರತೆ ಮೆಚ್ಚುಗೆಗೆ ಅರ್ಹವಾಗಿದೆ.. 194 ದಿನಗಳನ್ನು ಸಮುದ್ರದಲ್ಲಿ ಕಳೆದ್ ಈ ತಂಡದ ಪ್ರಯಾಣ ಯಶಸ್ವಿಯಾಗಿದೆ.ನಾವೋ ಸೇನಾ (ಗ್ಯಾಲಾಂಟರಿ) ಪ್ರಶಸ್ತಿ ಲಭಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ
ನಾವೋ ಸೇನಾ (ಗ್ಯಾಲಾಂಟರಿ) ಪದಕವನ್ನು ತಾರಿಣಿ ತಂಡದ ವನಿತೆಯರ ಜತೆಗೆ ಲೆಫ್ಟಿನೆಂಟ್ ಸಿಡಿಆರ್ ಅನಿಲ್ ರೈನಾ ಮತ್ತು ಕುನಾಲ್ ಸೈನಿ ಸಹ ಪಡೆದುಕೊಳ್ಳಲಿದ್ದಾರೆ.