ನವದೆಹಲಿ : ಅಶುತೋಷ್ ಆಪ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಆಪ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಯಾವುದೇ ಪಯಾಣಕ್ಕೆ ಅಂತ್ಯವಿರುತ್ತದೆ. ಆಪ್ ನೊಂದಿಗೆ ತಮ್ಮ ಸಹಯೋಗ ಸುಂದರ ಹಾಗೂ ಕ್ರಾಂತಿಕಾರಕ ರೀತಿಯಾಗಿತ್ತು. ಪಕ್ಷ ಹಾಗೂ ಪ್ರಾರ್ಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಅಂಗೀಕರಿಸಲ್ಪಟ್ಟಿದೆ ಎಂದು ಅವರು ಟ್ವೀಟರ್ ನಲ್ಲಿ ಹೇಳಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ತಮ್ಮ ಚಿಂತನೆಗಳನ್ನು ಬೆಂಬಲಿಸಿದ ಎಲ್ಲರನ್ನು ಅಭಿನಂದಿಸುವುದಾಗಿ ಅವರು ಹೇಳಿದ್ದಾರೆ.