ನವದೆಹಲಿ: 72ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸರ್ಚ್ ಇಂಜಿನ್ ಗೂಗಲ್ ಡೂಡಲ್ ಮೂಲಕ ಗೌರವ ನೀಡಿದೆ.
ದೇಶದ ಲಾರಿಗಳ ಮೇಲೆ ಬಿಡಿಸಲಾಗುವ ಕಲೆಯಿಂದ ಪ್ರೇರೆಪಿತವಾಗಿ ಗೂಗಲ್ ಸುಂದರವಾದ ಡೂಡಲ್ ಬಿಡಿಸುವ ಮೂಲಕ ಗೌರವ ಸಮರ್ಪಿಸಿದೆ.
ಡೂಡಲ್ ನ ಮಧ್ಯಭಾಗದಲ್ಲಿ ನೀರಿನಲ್ಲಿ ರಾಷ್ಟ್ರಪುಷ್ಪ ಕಮಲ, ಮಧ್ಯೆ ರಾಷ್ಟ್ರಪಕ್ಷಿ ನವಿಲು ಹಾಗೂ ಎಡ ಮತ್ತು ಬಲ ಬದಿಯಲ್ಲಿ ಆನೆ ಮತ್ತು ಬೆಂಗಾಲ್ ಟೈಗರ್ ಚಿತ್ರವನ್ನು ಬಿಡಿಸಲಾಗಿದೆ.