ತುರ್ತು ಸ್ಥಿತಿಯಲ್ಲಿ ಗರ್ಭೀಣಿಯನ್ನು ಹೊತ್ಯೊಯ್ದು ಆಸ್ಪತ್ರೆಗೆ ಸೇರಿಸಿದ ಯೋಧರು, ನೆಟಿಗರಿಂದ ಪ್ರಶಂಸೆ!
ಮಹಾಮಳೆಗೆ ಛತ್ತೀಸ್ ಗಢ ತತ್ತರಿಸಿದ್ದು ದುರ್ಗಮ ಪ್ರದೇಶಗಳಲ್ಲಿ ರಸ್ತೆಗಳೆಲ್ಲಾ ಅಸ್ತವ್ಯಸ್ತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಯೋಧರು ಹೆರಿಗೆ ನೋವಿನಿಂದ...
ಮಹಾಮಳೆಗೆ ಛತ್ತೀಸ್ ಗಢ ತತ್ತರಿಸಿದ್ದು ದುರ್ಗಮ ಪ್ರದೇಶಗಳಲ್ಲಿ ರಸ್ತೆಗಳೆಲ್ಲಾ ಅಸ್ತವ್ಯಸ್ತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಯೋಧರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು 5 ಕಿ. ಮಿ ದೂರದವರೆಗೆ ಹೆಗಲ ಮೇಲೆ ಹೊತ್ಯೊಯ್ದು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಕೊಂಡಗೊನ್ ಜಿಲ್ಲೆಯ ಹದೇಲಿ ಗ್ರಾಮದ ಗರ್ಭೀಣಿ ಶಾದೈ ಎಂಬುವರು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ)ಯ 41 ಬ್ಯಾಟಾಲಿಯನ್ ಯೋಧರು ಸ್ಟೆಕ್ಚರ್ ಮೂಲಕ ಮಹಿಳೆಯನ್ನು ಹೆಗಲ ಮೇಲೆ ಹೊತ್ಯೊಯ್ದು ಆತ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಯೋಧರು ಗರ್ಭಿಣಿ ಮಹಿಳೆಯನ್ನು ಹೊತ್ಯೊಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟಿಗರು ಪ್ರಶಂಸಿಸಿದ್ದಾರೆ.
ದುರ್ಗಮದ ಹಾದಿಯಲ್ಲಿ ಯೋಧರು ಮಹಿಳೆಯನ್ನು ಸ್ಟೆಕ್ಟರ್ ಮೇಲೆ ಮಲಗಿಸಿ ನಾಲ್ವರು ಯೋಧರು ಹೊತ್ಯೊಯ್ಯುತ್ತಿರುವ ವಿಡಿಯೋ ನೋಡಿದ ನೆಟಿಗರು ಯೋಧರ ಕಾರ್ಯವನ್ನು ಪ್ರಶಂಸಿಸಿದ್ದಾರೆ.
The REAL heroes. May the force be with you. Now. And forever. Always. Jai Hind!!