ಸ್ವಾತಂತ್ರ್ಯ ದಿನಾಚರಣೆ ಭಾಷಣ: ಕೆಂಪು ಕೋಟೆಯಲ್ಲಿ ತಮಿಳು ಮಾತನಾಡಿ ಅಚ್ಚರಿ ಮೂಡಿಸಿದ ಪ್ರಧಾನಿ ಮೋದಿ!
ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾದ ನಂತರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿಗಳು ಮಾಡುತ್ತಿದ್ದ ಭಾಷಣದ ರೀತಿ-ರಿವಾಜುಗಳು ಸಾಕಷ್ಟು ಬದಲಾಗಿದ್ದು, ದೇಶದ ಜನತೆ ಪ್ರಧಾನಿಗಳ ಮಾತನ್ನು ಕೇಳಲು ಕಾತರದಿಂದ ಕಾಯುತ್ತಿರುತ್ತಾರೆ. ಪ್ರತಿ ಸ್ವಾತಂತ್ರ್ಯ ದಿನಾಚರಣೆಯಲ್ಲೂ ಹೊಸತನ್ನು ಹೊಂದಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಸ್ಪೆಷಾಲಿಟಿ.
ಆ.15 ರಂದು 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಭಾಷಣದಲ್ಲಿ ತಮಿಳು ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ತಮಿಳುನಾಡಿನ ಶ್ರೇಷ್ಠ ಸಾಹಿತಿ ಸುಬ್ರಹ್ಮಣ್ಯ ಭಾರತಿ ಅವರನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮಿಳಿನಲ್ಲಿ ಮಾತನಾಡಿದ್ದು, "ಭಾರತ ಶ್ರೇಷ್ಠ ರಾಷ್ಟ್ರವಾಗಷ್ಟೇ ಉದಯಿಸುವುದಿಲ್ಲ, ಅನ್ಯರಿಗೆ ಸ್ಪೂರ್ತಿ ನೀಡುವ ರಾಷ್ಟ್ರವೂ ಆಗಿರುತ್ತದೆ" ಎಂದು ಭಾರತಿ ಅವರು ಬರೆದಿದ್ದರು. ಅವರು ಹೇಳಿದಂತೆ ಭಾರತ ಇಡೀ ವಿಶ್ವಕ್ಕೇ ಎಲ್ಲಾ ಸಂಕೋಲೆಗಳಿಂದ ಹೊರಬರುವುದಕ್ಕೆ ಮಾರ್ಗದರ್ಶನ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ.
ಮೋದಿ, ಕೆಂಪುಕೋಟೆಯಲ್ಲಿ ತಮಿಳುನಾಡಿನ ಶ್ರೇಷ್ಠ ಸಾಹಿತಿ ಸುಬ್ರಹ್ಮಣ್ಯ ಭಾರತಿ ಅವರನ್ನು ಉಲ್ಲೇಖಿಸುವುದೂ ಅಲ್ಲದೇ ತಮಿಳಿನಲ್ಲೇ ಕವನ ಓದಿರುವುದು ಅಚ್ಚರಿ ಮೂಡಿಸಿದ್ದಾರೆ.