ಅಟಲ್ ಬಿಹಾರಿ ವಾಜಪೇಯಿ 
ದೇಶ

ಭಾರತದ ಮೂರು ರಾಜ್ಯಗಳಿಂದ ಸಂಸತ್ ಗೆ ಆಯ್ಕೆಯಾಗಿದ್ದ ಏಕೈಕ ಮುತ್ಸದ್ದಿ ರಾಜಕಾರಣಿ ವಾಜಪೇಯಿ

ನವದೆಹಲಿಯಲ್ಲಿರುವ ಪ್ರಧಾನಿ ಗದ್ದುಗೆಗೆ ಉತ್ತರ ಪ್ರದೇಶವೇ ಮಾರ್ಗ ಎನ್ನುವುದು ರಾಷ್ಟ್ರ ರಾಜಕಾರಣದ ಸಿದ್ಧ ಸೂತ್ರ.

ನವದೆಹಲಿಯಲ್ಲಿರುವ ಪ್ರಧಾನಿ ಗದ್ದುಗೆಗೆ ಉತ್ತರ ಪ್ರದೇಶವೇ ಮಾರ್ಗ ಎನ್ನುವುದು ರಾಷ್ಟ್ರ ರಾಜಕಾರಣದ ಸಿದ್ಧ ಸೂತ್ರ. ಆದರೆ ದೇಶ ಕಂಡ ಕವಿ ಹೃದಯದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ರಾಜಕೀಯ ಜೀವನದಲ್ಲಿ ಮೂರು ಬೇರೆ ಬೇರೆ ರಾಜ್ಯಗಳಿಂದ ಸಂಸತ್ ಗೆ ಆಯ್ಕೆಯಾಗಿದ್ದರು.
ಅಜಾತಶತ್ರು ಎಂಬ ನಾಮಕ್ಕೆ ಅನ್ವರ್ಥರಾಗಿದ್ದ ಅಟಲ್ ಬಿಹಾರಿ ವಾಜಪೇಯಿ 1957 ರಲ್ಲಿ ನಡೆದ  2 ನೇ ಲೋಕಸಭೆ ಹಾಗೂ 1967 ರಲ್ಲಿ ನಡೆದ 4 ನೇ ಲೋಕಸಭೆಗೆ  ಆಯ್ಕೆಯಾಗಿದ್ದು ಉತ್ತರ ಪ್ರದೇಶದ ಬಲರಾಮಪುರದಿಂದ. 
ಇದಾದ ಬಳಿಕ 1971 ರಲ್ಲಿ ನಡೆದ 5 ನೇ ಲೋಕಸಭೆಗೆ ಕ್ಷೇತ್ರ ಬದಲಾವಣೆ ಮಾಡಿದ್ದ ವಾಜಪೇಯಿ ಅವರು ಮಧ್ಯಪ್ರದೇಶದ ಗ್ವಾಲಿಯರ್ ನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ನಂತರ 1977 ರಲ್ಲಿ ನಡೆದ 6 ನೇ ಲೋಕಸಭಾ ಚುನಾವಣೆಯಲ್ಲಿ ಹಾಗೂ 7 ನೇ ಲೋಕಸಭೆಗೆ  ನವದೆಹಲಿಯಿಂದ ಆಯ್ಕೆಯಾಗಿದ್ದರು. ನಂತರ 1991 ರಿಂದ 2004 ರಲ್ಲಿ ನಡೆದ ಉಳಿದ 7 ಲೋಕಸಭಾ ಚುನಾವಣೆಗಳಲ್ಲಿ ಲಖನೌ ದಿಂದ ಸ್ಪರ್ಧಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ, ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

IPL 2026: RCB vs PBKS ಪಂದ್ಯದಲ್ಲಿ ಎರಡು ಭಾರೀ ದಾಖಲೆ ನಿರ್ಮಿಸಿದ Virat Kohli

IPL 2026: ರನ್ ಮೆಷಿನ್ Virat Kohli ದಾಖಲೆಯನ್ನೇ ಮುರಿದು ಐತಿಹಾಸಿಕ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ!

ಖ್ಯಾತ ತಮಿಳು ನಿರ್ಮಾಪಕ K Rajan ಆತ್ಮಹತ್ಯೆ; ಚೆನ್ನೈನಲ್ಲಿ 85ನೇ ವಯಸ್ಸಿನಲ್ಲಿ ನಿಧನ!

ಸ್ವಾತಂತ್ರ್ಯ ಹೋರಾಟಗಾರ ಗಣೇಶ್ ಶಂಕರ್ ವಿದ್ಯಾರ್ಥಿ ಪ್ರತಿಮೆ ಸ್ಥಾಪನೆಗೆ ವಿಳಂಬ: ಯೋಗಿಗೆ ರಕ್ತದಲ್ಲಿ ಪತ್ರ ಬರೆದ SP ಶಾಸಕ!

SCROLL FOR NEXT